• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಕ್ಕರೆ ಕಾಯಿಲೆಗೆ ಹಲವು ಆವಿಷ್ಕಾರಗಳಾಗಿವೆ, ಹೆದರಬೇಡಿ: ಡಾ.ಪೃಥ್ವಿ

Any Mind by Any Mind
October 15, 2022
in ಕರ್ನಾಟಕ
0
ಸಕ್ಕರೆ ಕಾಯಿಲೆಗೆ ಹಲವು ಆವಿಷ್ಕಾರಗಳಾಗಿವೆ, ಹೆದರಬೇಡಿ: ಡಾ.ಪೃಥ್ವಿ
Share on WhatsAppShare on FacebookShare on Telegram

ಶಿವಮೊಗ್ಗ: ವಿನ್ ಲೈಫ್ ಟ್ರಸ್ಟ್ ( NGO) ವತಿಯಿಂದ ಮೊದಲ ಸಲ ಮಧುಮೇಹ ಸಮಾವೇಶವನ್ನ ಭಾನುವಾರ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪೂರ್ವಭಾವಿಯಾಗಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪೃಥ್ವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಕ್ಕರೆ ಕಾಯಿಲೆ ಅರಿವು ಜನರಿಗೆ ಎಷ್ಟು ಮುಖ್ಯ ಎಂದು ಹೇಳಿದರು.

ADVERTISEMENT

ಭಾರತ ಕೆಲ ದಿನಗಳಲ್ಲೇ ಸಕ್ಕರೆ ಕಾಯಿಲೆ ರಾಜಧಾನಿಯಾಗಲಿದೆ.‌ ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಸಕ್ಕರೆ ಕಾಯಿಲೆ ಉಲ್ಭಣಗೊಳ್ಳುತ್ತಿದೆ. ಬೇರೆ ಕಾಯಿಲೆಗಳಂತೆ ಇದಲ್ಲ. ಬಿಪಿ, ಮಲೇರಿಯಾದಂತ ರೋಗಗಳು ಬಂದರೆ ವೈದ್ಯರಿಗೆ ತಿಳಿದಿದ್ದರೆ ಸಾಕು. ವೈದ್ಯರ ಚಿಕಿತ್ಸೆಯಿಂದ ರೋಗ ಗುಣವಾಗಬಹುದು. ಸಕ್ಕರೆ ಕಾಯಿಲೆಯಲ್ಲಿ ವೈದ್ಯರ ಔಷಧದೋಪಚಾರ ಐವತ್ತು ಪರ್ಸೆಂಟ್ ರೋಗಕ್ಕೆ ಚಿಕಿತ್ಸೆಯಾದರೆ ಇನ್ನುಳಿದ ಐವತ್ತು ಪರ್ಸೆಂಟ್ ರೋಗಿಯ ಪಾಲನೆಯೇ ಮುಖ್ಯವಾಗಿರುತ್ತದೆ. ಎರಡೂ ಸೇರಿದರೆ ನೂರಕ್ಕೆ ನೂರು ಫಲಿತಾಂಶ ಬರಲು ಸಾಧ್ಯ. ಸಕ್ಕರೆ ಕಾಯಿಲೆ ಬಗ್ಗೆ ಬಲ್ಲವನು ಆರೋಗ್ಯದಲ್ಲಿ ಸುಧಾರಣೆ ಹೊಂದುತ್ತಾನೆ ಎಂದರು.

ಬಹಳಷ್ಟು ಜನರಿಗೆ ಸಕ್ಕರೆ ಕಾಯಿಲೆ ಬಗ್ಗೆ ಸಾಮಾನ್ಯ ತಿಳಿವಳಿಕೆಯೇ ಇರೋದಿಲ್ಲ. ಕಾಯಿಲೆ ಉಲ್ಭಣಿಸಿದರೆ ದೃಷ್ಟಿ ಹೀನವಾಗುತ್ತೆ, ಕಾಲು ಕಳೆದುಕೊಳ್ಳುತ್ತೇವೆ, ಕಿಡ್ನಿ ಫೇಲ್ಯೂರ್ ಸಂಭವಿಸುವುದು, ಸಕ್ಕರೆ ಕಾಯಿಲೆಯಿಂದಲೇ ಇಷ್ಟೆಲ್ಲಾ ಸಮಸ್ಯೆಗಳಾಗುತ್ತೆ ಎಂಬುದು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ..! ಕಂಡಿತವಾಗಿಯೂ ಇವನ್ನೆಲ್ಲಾ ತಡೆಯಲು ಸಾಧ್ಯವಿದೆ. ಸಕ್ಕರೆ ಕಾಯಿಲೆ ಬಗ್ಗೆ ಇವನ್ನೆಲ್ಲಾ ತಿಳಿದುಕೊಂಡಿದ್ದರೆ ನಾವು ಆರೋಗ್ಯ ಹೊಂದಲು ಸಾಧ್ಯ.

ಕಾಯಿಲೆ ತಡೆಯಲು ಹೊಸ ಅವಿಷ್ಕಾರಗಳು ಆಗಿವೆ. ಹೊಸತಾಗಿ ಇನ್ಸುಲಿನ್ ಪಂಪ್ ಇದೆ. ವೈದ್ಯರು ಚುಚ್ಚಿ ಇನ್ಸುಲಿನ್ ನೀಡುವುದು ಬೇಡ..! ಪ್ಯಾಚ್ ತರಹದ ವಸ್ತು ದೇಹಕ್ಕೆ ಅಂಟಿಸಿಕೊಂಡರೆ ಅದೇ ಅಗತ್ಯಕ್ಕೆ ತಕ್ಕ ಇನ್ಸುಲಿನ್ ಪೂರೈಕೆ ಮಾಡುತ್ತೆ. ಮೊಬೈಲ್ ಗೆ ಬ್ಲೂಟ್ಯೂಥ್ ಸಂಪರ್ಕದ ಮೂಲಕ ಮಾಹಿತಿ ಫೀಡ್ ಆಗುತ್ತೆ. ಸಕ್ಕರೆ ಕಾಯಿಲೆಯಿಂದ ಗ್ಯಾಂಗ್ರೀನ್ ಸಂಭವ ಇರುತ್ತೆ. ರೋಗಿಗಳು ನಡೆದಾಡಲು ಚಪ್ಪಲಿಗಳಿಂದ ಹಿಡಿದು ಔಷಧಗಳವರೆಗೆ ಹೊಸ ಸಂಶೋಧನೆಗಳಾಗಿವೆ.

ಕೃತಕ ಬುದ್ಧಿಮತ್ತೆ ಸಲಕರಣೆಗಳು ಮಾರುಕಟ್ಟೆಗೆ ಬಂದಿವೆ‌. ಇವೆಲ್ಲದರ ಮಾಹಿತಿ ರೋಗಿಗಳಿಗೆ ಇರಬೇಕು‌. ರೋಗದ ಬಗ್ಗೆ ಎಷ್ಟು ಮಾಹಿತಿ ಇರುತ್ತೋ ಅಷ್ಟು ಒಳ್ಳೆಯದು. ವಿಶ್ವದಲ್ಲಿ ಪ್ರತೀ ಐದು ಸೆಕೆಂಡ್ ಗೆ ಒಬ್ಬ ಸಕ್ಕರೆ ಕಾಯಿಲೆ ರೋಗಿ ಮೃತನಾಗುತ್ತಿದ್ದಾನೆ. ಜನ ಎಚ್ಚರಿಕೆಯಿಂದಿದ್ದರೆ ಇದನ್ನ ನಿಯಂತ್ರಣದಲ್ಲಿಡಬಹುದು. ನಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಹೇಗಿಟ್ಟುಕೊಳ್ಳಬೇಕು ಎಂಬುದನ್ನ ಭಾನುವಾರ ನಡೆಯುವ ಸಕ್ಕರೆಕಾಯಿಲೆ ಉಚಿತ ಸಮಾವೇಶದಲ್ಲಿ ಮಾಹಿತಿ ನೀಡಲಿದ್ದೇವೆ ಎಂದು ವೈದ್ಯ ಪೃಥ್ವಿ ಹೇಳಿದರು

Previous Post

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್:‌ ಆರೋಪಿ ಬಂಧನ

Next Post

ಐದೇ ದಿನಕ್ಕೆ ಬಿಬಿಎಂಪಿ ಆಪರೇಷನ್ ಬುಲ್ಡೋಜರ್ ಥಂಡಾ : ಸರ್ವೇ ನೆಪ ಕೊಟ್ಟು 2 ದಿನಗಳಿಂದ ಕಾರ್ಯಾಚರಣೆ ಮಾಡದ ಪಾಲಿಕೆ!

Related Posts

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!
Top Story

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಕಾಂಗ್ರೆಸ್‌ ಶಾಸಕ ಎನ್.ಎ.ಹ್ಯಾರಿಸ್‌ ಮನೆ ಮೇಲೆ ಇಂದು ಬೆಳಂಬೆಳಿಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಅಶೋಕ ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ,...

Read moreDetails
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
Next Post
ಬಿಬಿಎಂಪಿ ಬೇಡ, ಪ್ರತ್ಯೇಕ ಪಾಲಿಕೆ ಮಾಡಿ ಎಂದು ಸರ್ಕಾರಕ್ಕೆ ಐಟಿ ಕಂಪನಿಗಳ ಆಗ್ರಹ!

ಐದೇ ದಿನಕ್ಕೆ ಬಿಬಿಎಂಪಿ ಆಪರೇಷನ್ ಬುಲ್ಡೋಜರ್ ಥಂಡಾ : ಸರ್ವೇ ನೆಪ ಕೊಟ್ಟು 2 ದಿನಗಳಿಂದ ಕಾರ್ಯಾಚರಣೆ ಮಾಡದ ಪಾಲಿಕೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada