ಟಿಪ್ಪು ಸುಲ್ತಾನ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ವಿವಾದವೊಂದು ಹುಟ್ಟಿಕೊಂಡಿದ್ದು ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟಿದೆ.
ಇನ್ನು ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಮಾತಿನ ಮಲ್ಲಯುದ್ದ ಜೋರಾಗಿ ನಡೆಯುತ್ತಿರುತ್ತದೆ. ಟಿಪ್ಪು ಬಗ್ಗೆ ಹಲವರು ತಮ್ಮದೇ ಅಭಿಪ್ರಾಯವನ್ನ ಮಂಡಿಸಿದ್ದಾರೆ.
ಆದರೆ, ಕಾಂಗ್ರೆಸ್ನ ರಾಜ್ಯಸಬೆ ಸಂಸದರಾದ ಜಿ.ಸಿ.ಚಂದ್ರಶೇಖರ್ ಈ ವಿಚಾರವಾಗಿ ಹೊಸ ವ್ಯಾಖ್ಯಾನ ನೀಡಿದ್ದು ಟಿಪ್ಪು ಸುಲ್ತಾನ್ ಮೂಲ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚಂದ್ರಶೇಖರ್ ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಟಿಪ್ಪು ಸುಲ್ತಾನ್ ನ ಮೂಲ ಹೆಸರು ತಿಪ್ಪೇಸ್ವಾಮಿ ಎಂದು. ತಿಪ್ಪೇಸ್ವಾಮಿಯ ವರಪ್ರಸಾದವಾಗಿ ಟಿಪ್ಪುಸುಲ್ತಾನ್ ಜನಿಸಿದರು. ಹೀಗಾಗಿ, ಅವರಿಗೆ ಮೊದಲು ತಿಪ್ಪೇಸ್ವಾಮಿ ಅಂತಾ ಹೆಸರಿಟ್ಟಿದ್ದರು. ನಂತರ ಟಿಪ್ಪುವಾಗಿದೆ. ಆ ಭಾಗದ ಜನರೇ ಇದನ್ನು ಈಗಲೂ ಹೇಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಟಿಪ್ಪು ಸುಲ್ತಾನ್ ವಿಚಾರವಾಗಿ ಎರಡು ಪಕ್ಷಗಳ ನಡುವಿನ ವಾಕ್ಸಮರ ಜೋರಾಗಿದ್ದು ಕಾಂಗ್ರೆಸ್ ಸಂಸದರು ಮಾಡಿರುವ ಟ್ವೀಟ್ ಮುಂದಿನ ದಿನಗಳಲ್ಲಿ ಅದೆಲ್ಲಿಗೆ ಕೊಂಡೊಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.











