ರಷ್ಯಾ ಸೈನಿಕರನ್ನು ಹಿಮ್ಮೆಟಿಸಿ ಪ್ರಮುಖ ನಗರವನ್ನು ಉಕ್ರೇನ್ ಮರುವಶಪಡಿಸಿಕೊಂಡ ಬೆನ್ನಲ್ಲೇ ರಷ್ಯಾ ದಾಳಿಯನ್ನು ತೀವ್ರಗೊಳಿಸಿದೆ.
ಉಕ್ರೇನ್ ನ ಹಲವು ನಗರಗಳ ಮೇಲೆ ರಷ್ಯಾ ಸೈನಿಕರು ಶನಿವಾರದಿಂದ ದಾಳಿ ನಡೆಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಉಕ್ರೇನ್ ರಾಜಧಾನಿ ಕೀವ್ ಬಳಿಯ ಜಪೊರಿಜಾಜಿಯಾ ಅಣುಸ್ಥಾವರದ ಬಳಿ ಕೂಡ ರಷ್ಯಾ ದಾಳಿಯ ಬಾಂಬ್ ಶೆಲ್ ಗಳು ಬಂದು ಬಿದ್ದಿರುವುದರಿಂದ ಮತ್ತೆ ಆತಂಕ ಶುರುವಾಗಿದೆ.

ರಷ್ಯಾ ದಾಳಿ ವೇಳೆ ಅಣುಸ್ಥಾವರದ ನಾಲ್ಕು ಘಟಕಗಳು ಹಾನಿಯಾಗಿದ್ದು, ಕೂಡಲೇ ಉಕ್ರೇನ್ ಗ್ರಿಡ್ ಇಂಜಿನಿಯರ್ ಗಳು ಅದರ ದುರಸ್ಥಿ ಮಾಡಿದೆ. ಈ ಅಣುಸ್ಥಾವರದಿಂದ ಹಲವು ಪ್ರಮುಖ ನಗರಗಳಿಗೆ ವಿದ್ಯುತ್ ಸರಬರಾಜು ಆಗುತ್ತಿದೆ ಎಂದು ಹೇಳಲಾಗಿದೆ.