ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ದೇಶದ ಅತ್ಯಂತ ಜನಪ್ರಿಯ ಸೇರಿದಂತೆ 26 ಮಾತ್ರೆಗಳನ್ನು ಅಗತ್ಯ ಔಷಧಿಗಳ ಪಟ್ಟಿಯಿಂದ ತೆಗೆದುಹಾಕಿದೆ.
ಔಷಧ ನಿಯಂತ್ರಣ ಸಂಸ್ಥೆ ಕ್ಯಾನ್ಸರ್ ಗೆ ಕಾರಣವಾಗುವ ಔಷಧಗಳ ಶಿಫಾರಸು ಪಟ್ಟಿ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಈ ಆದೇಶ ಹೊರಡಿಸಿದೆ.

ಔಷಧ ನಿಯಂತ್ರಣ ಹಾಗೂ ದೆಹಲಿಯ ಏಮ್ಸ್ ಆಸ್ಪತ್ರೆಯ ತಜ್ಞ ವೈದ್ಯರೊಂದಿಗೆ ಚರ್ಚಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಸಿಡಿಟಿ, ಗ್ಯಾಸ್ಟ್ರಿಕ್ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಪಡೆಯುವ ಮಾತ್ರೆಗಳಲ್ಲಿ ಜನಪ್ರಿಯವಾದ ರ್ಯಾಂಟೆಕ್, ಜಿಂಟಿಕ್ ಮತ್ತು ಅಸಿಲಾಕ್ ಮುಂತಾದ ಬ್ರ್ಯಾಂಡೆಡ್ ಮಾತ್ರೆಗಳನ್ನು ಅಗತ್ಯ ಔಷಧಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಲ್ಲದೇ ಈ ಪಟ್ಟಿಯಲ್ಲಿ ೩೮೪ ಮಾತ್ರೆಗಳ ಪಟ್ಟಿ ಬಿಡುಗಡೆ ಮಾಡಿದೆ.






