• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಚಾಂಪಿಯನ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ದೇವರಾಜ್!

Any Mind by Any Mind
September 13, 2022
in ಸಿನಿಮಾ
0
ಚಾಂಪಿಯನ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ದೇವರಾಜ್!
Share on WhatsAppShare on FacebookShare on Telegram

ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಚಾಂಪಿಯನ್” ಚಿತ್ರದ ಟ್ರೇಲರ್ ಅನ್ನು ಡೈನಾಮಿಕ್ ಸ್ಟಾರ್ ದೇವರಾಜ್ ಬಿಡುಗಡೆ ಮಾಡಿದರು. ಈ ಚಿತ್ರ ಅಕ್ಟೋಬರ್ 14 ರಂದು ತೆರೆಗೆ ಬರಲಿದೆ.

ADVERTISEMENT

ನಾನು ಹದಿನಾಲ್ಕು ವರ್ಷಗಳ ಹಿಂದೆ ನನ್ನ ಸ್ನೇಹಿತ ಸಚಿನ್ ಧನಪಾಲ್ ಗೆ ಹೇಳಿದ್ದೆ.  ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾ ಹೀರೋ ಮಾಡುತ್ತೀನಿ ಎಂದು. ಈಗ ಆ ಮಾತು ನಿಜವಾಗಿದೆ. ಸಚಿನ್ ಧನಪಾಲ್ ನಾಯಕನಾಗಿ ನಟಿಸಿರುವ “ಚಾಂಪಿಯನ್” ಚಿತ್ರವನ್ನು ನಾನು ನಿರ್ಮಾಣ ಮಾಡಿದ್ದೀನಿ. ಚಿತ್ರ ಅಕ್ಟೋಬರ್ 14 ರಂದು ಬಿಡುಗಡೆಯಾಗಲಿದೆ.

2019 ರಲ್ಲಿ ಈ ಚಿತ್ರ ಆರಂಭವಾಯಿತು. ನಂತರ ಕೋವಿಡ್.. ಆನಂತರ ನಮ್ಮ ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ಅವರ ಹಠಾತ್ ನಿಧನ. ಈ ರೀತಿ ಹಲವು ಅಡೆತಡೆಗಳನ್ನು ದಾಟಿ ಈಗ ಚಿತ್ರ ಬಿಡುಗಡೆ ಹಂತ ತಲುಪಿದೆ‌. ಉತ್ತರ ಕರ್ನಾಟಕದ ನನ್ನ ಸ್ನೇಹಿತರು ತಮ್ಮದೇ ಚಿತ್ರ ಅನ್ನುವ ಹಾಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಹಾಗೂ ಸಚಿನ್ ಕುಟುಂಬದವರು ಸಾಕಷ್ಟು ಜನ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಮಿಯಲ್ಲಿ ನಮಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರ ಬೆಂಬಲ ಕೂಡ ನಮ್ಮಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಶಿವಾನಂದ ಎಸ್ ನೀಲಣ್ಣನವರ್.

ನಾನು ಚಿತ್ರದಲ್ಲಿ ನಟಿಸುತ್ತೇನೆ ಎಂದು ಅಂದು ಕೊಂಡಿರಲಿಲ್ಲ. ಏಕೆಂದರೆ ನನ್ನ ತಂದೆ, ತಮ್ಮ ಎಲ್ಲಾ ಆರ್ಮಿಯಲ್ಲಿದ್ದಾರೆ. ನಾನು ಸಹ ಪರೀಕ್ಷೆ ಬರೆದಿದ್ದೆ. ಆದರೆ ಸೆಲೆಕ್ಟ್ ಆಗಲಿಲ್ಲ. ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದೆ. ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತ ಶಿವಾನಂದ, ಕೊಟ್ಟ ಮಾತಿನಂತೆ “ಚಾಂಪಿಯನ್” ಚಿತ್ರದ ಮೂಲಕ ನನ್ನನ್ನು ಹೀರೋ ಮಾಡಿದ್ದಾರೆ. 

ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಸನ್ನಿಲಿಯೋನ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.  ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಸರ್ ಗೆ, ಸಮಾರಂಭಕ್ಕೆ ಆಗಮಿಸಿರುವ ಲಹರಿ ವೇಲು ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ಮುಂದಿನ ತಿಂಗಳ ಹದಿನಾಲ್ಕು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಪ್ರೋತ್ಸಾಹ ನೀಡಿ ಎಂದರು ನಾಯಕ ಸಚಿನ್ ಧನಪಾಲ್.

ನಾನು ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ ನಿರ್ದೇಶಕ ಶಾಹುರಾಜ್ ಶಿಂಧೆ. ಇಂದು ಅವರಿಲ್ಲದಿರುವುದು ತುಂಬಾ ದುಃಖದ ವಿಷಯ.  ಉತ್ತರ ಕರ್ನಾಟಕದ ನಿರ್ಮಾಪಕ ಶಿವಾನಂದ್ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಸ್ನೇಹಿತನಿಗಾಗಿ ಅವರು ಚಿತ್ರ ನಿರ್ಮಾಣ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ.  ಮೊದಲ ಚಿತ್ರದಲ್ಲೇ ಸಚಿನ್ ಚೆನ್ನಾಗಿ ನಟಿಸಿದ್ದಾರೆ. ನನ್ನ‌ ಪಾತ್ರ ಕೂಡ ಚೆನ್ನಾಗಿದೆ. ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕಿರಲಿ ಎಂದು ನಟಿ‌ ಅದಿತಿ ಪ್ರಭುದೇವ ತಿಳಿಸಿದರು.

ನನ್ನ ಮನೆಗೆ ಶಿವಾನಂದ್ ಹಾಗೂ ಸಚಿನ್ ಅವರು ಬಂದಿದಾಗ ನಾನು, ನಿರ್ಮಾಪಕ ಹಾಗೂ ಹೀರೋ ಬಂದಿದ್ದಾರೆ ಅಂದು ಕೊಂಡಿದ್ದೆ. ಆನಂತರ ಇವರ ಸ್ನೇಹದ ಬಗ್ಗೆ ತಿಳಿದು ಆನಂದವಾಯಿತು. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು ನಟ ದೇವರಾಜ್.

ಲಹರಿ ವೇಲು “ಚಾಂಪಿಯನ್” ಗೆ ಶುಭ ಕೋರಿದರು. ಛಾಯಾಗ್ರಾಹಕ ಸರವಣನ್ ನಟರಾಜನ್ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ ಚಿತ್ರದ ಬಗ್ಗೆ ‌ಮಾತನಾಡಿದರು.

Previous Post

ರ್ಯಾಂಟೆಕ್‌ ಸೇರಿ 26 ಮಾತ್ರೆ ಅಗತ್ಯ ಔಷಧಗಳ ಪಟ್ಟಿಯಿಂದ ಹೊರಗೆ!

Next Post

ಮೊಟ್ಟೆ ಎಸೆದವರು ವೀರರೂ ಅಲ್ಲ, ಶೂರರೂ ಅಲ್ಲ: ಸಿದ್ದರಾಮಯ್ಯ ಗರಂ

Related Posts

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
ಸಿನಿಮಾ

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

by ಪ್ರತಿಧ್ವನಿ
May 14, 2026
0

ಬೆಂಗಳೂರು: ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೇ 13ರ ಮುಂಜಾನೆ ಹೃದಯಾಘಾತದಿಂದ ಅವರು...

Read moreDetails
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

May 5, 2026
ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

May 5, 2026
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

May 2, 2026
Next Post
ಕೇಂದ್ರದಿಂದ ಸಾಂಸ್ಕೃತಿಕ ಭಯೋತ್ಪಾದನೆ; ಹಿಂದಿ ಹೇರಿಕೆಗೆ  ಸಿದ್ದರಾಮಯ್ಯ ಕಿಡಿ

ಮೊಟ್ಟೆ ಎಸೆದವರು ವೀರರೂ ಅಲ್ಲ, ಶೂರರೂ ಅಲ್ಲ: ಸಿದ್ದರಾಮಯ್ಯ ಗರಂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada