ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾದ ಆಸ್ಟ್ರೇಲಿಯಾ ತಂಡದಲ್ಲಿ ಟಿಮ್ ಡೇವಿಡ್ ಸ್ಥಾನ ಪಡೆಯುವ ಮೂಲಕ ಟಿ-20ಗೆ ಮರಳಿದ್ದಾರೆ.
ವಿಶ್ವಕಪ್ ಟೂರ್ನಿಗೂ ಮುನ್ನ ಅಂದರೆ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಸರಣಿಗೂ ಟಿಮ್ ಡೇವಿಡ್ ಸ್ಥಾನ ಪಡೆಯುವ ಮೂಲಕ ವಿಶ್ವಕಪ್ ಸಿದ್ಧತಾ ತಂಡದಲ್ಲೂ ಸ್ಥಾನ ಗಳಿಸಿದ್ದಾರೆ.
ಸಿಂಗಾಪುರ ಮೂಲದ ಟಿಮ್ ಡೇವಿಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದಾರೆ. ಬಿಬಿಎಸ್ ಸೇರಿದಂತೆ ಹಲವು ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡಿರುವ ಟಿಮ್ ಡೇವಿಡ್ ಸಿಂಗಾಪುರ ತಂಡದ ಪರವಾಗಿಯೂ 14 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ.

ಸೆಪ್ಟೆಂಬರ್ 20ರಿಂದ 25ರವರೆಗೆ ನಡೆಯಲಿರುವ ಭಾರತ ವಿರುದ್ಧದ ಸರಣಿಯಿಂದ ಡೇವಿಡ್ ವಾರ್ನರ್ ಗೆ ಕೊಕ್ ನೀಡಲಾಗಿದ್ದು, ಕೆಮರೂನ್ ಗ್ರೀನ್ ಆಡಲಿದ್ಧಾರೆ. ಆದರೆ ವಾರ್ನರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದು, ಇದು ಅವರ ಕೊನೆಯ ವಿಶ್ವಕಪ್ ಆಗಲಿದೆ ಎಂದು ಹೇಳಲಾಗಿದೆ.
ಟಿ-20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ:
ಏರಾನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕೂಸ್ ಸ್ಟೋನಿಸಿಸ್, ಮ್ಯಾಥ್ಯೂ ವೇಡ್ (ವಿ.ಕೀ.), ಟಿಮ್ ಡೇವಿಡ್, ಜೋಶ್ ಇಂಗ್ಲೀಸ್ (ವಿ.ಕೀ.), ಅಸ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಆಡಂ ಜಂಪಾ, ಜೋಷ್ ಹ್ಯಾಜ್ಲೆವುಡ್, ಕೇನ್ ರಿಚರ್ಡರ್ಸನ್.