ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದ್ದು, ಕರ್ನಾಟಕದಲ್ಲಿ ಗುಂಡ್ಲುಪೇಟೆಯಿಂದ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದೆ. ಇದು ಕಾಂಗ್ರೆಸ್ ಯಾತ್ರೆಯಲ್ಲ ಜನರ ಯಾತ್ರೆ ಇದರಲ್ಲಿ ಯಾರೂ ಬೇಕಾದ್ರೂ ಪಾಲ್ಗೊಳ್ಳಬಹುದು ಕೆಪಿಸಿಸಿ ಅಧ್ಯಕ್ಷ ಡಿಕ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಹಲವು ಸೇರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಇಂದು ಬೆಲೆ ಏರಿಕೆಯಿಂದ ದೇಶ ಮತ್ತು ರಾಜ್ಯದ ಜನರು ಕಂಗೆಟ್ಟಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ಸಿಗದೇ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಅದಕ್ಕೆ ಐಕ್ಯಾತೆ ಇಂದ ಹೋರಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆಯಾಗಬೇಕು. ಎಲ್ಲರಿಗೂ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ ಎಂದರು.

ಕರ್ನಾಟದಲ್ಲಿ 21 ಭಾರತ ಐಕ್ಯತಾ ಯಾತ್ರೆಗೆ ರೂಟ್ ಫಿಕ್ಸ್ ಮಾಡಲಾಗಿದೆ. ಪ್ರತಿದಿನ 25 ಕಿ.ಮೀ ಪಾದಯಾತ್ರೆ ನಡೆಯುತ್ತದೆ. ಭಾರತ ಒಗ್ಗೂಡಿಸುವ ಕೆಲ ಮಾಡುತ್ತೇವೆ ಎಂದು ಹೇಳಿದ್ದಾರೆ.