ಹೈಕೋರ್ಟ್ ದ್ವಿಸದಸ್ಯ ಪೀಠದ ತೀರ್ಮಾನದಂತೆ ಕಂದಾಯ ಇಲಾಖೆಯ ವಿವೇಚನೆಗೆ ಗಣೇಶೋತ್ಸವ ಆಚರಣೆಯ ಬಗ್ಗೆ ತಿಳಿಸಿದೆ. ನಾವು ಕೋರ್ಟ್ ಆದೇಶದಂತೆ ನಡೆಯುತ್ತೇವೆ. ಈಗಾಗಲೇ 5 ಮನವಿ ಬಂದಿದೆ. ಅದರಲ್ಲಿ 2 ಪರಿಗಣಿಸಿದ್ದೇವೆ. ಇನ್ನೂ ಎರಡು ದಿನ ಮನವಿ ಸಲ್ಲಿಸಲು ಅವಕಾಶ ನೀಡುತ್ತಿದ್ದೇನೆ. ಸ್ವಾತಂತ್ರ್ಯೋತ್ಸವವನ್ನು ಯಾವುದೇ ಗೊಂದಲ ಇಲ್ಲದೇ ಆಚರಿಸಿದ್ದೇವೆ. ಅದೇ ರೀತಿ ಎಲ್ಲ ಕಾರ್ಯಕ್ರಮಗಳು ನಡೆಯಬೇಕು. ನಮ್ಮ ಉದ್ದೇಶ ಯಾವುದೇ ಅಹಿತಕರ ಘಟನೆ ನಡೆಯದೇ ಇರುವ ಹಾಗೆ ನೋಡಿಕೊಳ್ಳವುದು ಎಂದು ಹೇಳಿದ್ದಾರೆ.
ಈ ಮೈದಾನದಲ್ಲಿ ಶೌಚಾಲಯ, ಅಶ್ವಥ್ ಕಟ್ಟೆ, ಅರಳಿಮರ ಎಲ್ಲವೂ ಇದೆ. ಒಂದೊಮ್ಮೆ ಅನುಮತಿ ನೀಡಿದರೆ ಎಲ್ಲಿ, ಎಷ್ಟು ದಿನ ಗಣಪತಿ ಕೂರಿಸಬೇಕು ಎನ್ನುವುದನ್ನು ವಿಚಾರ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಪ್ರಥಮ ಆದ್ಯತೆ. ಈಗಾಗಲೇ ಪೋಲಿಸ್ ಇಲಾಖೆ ಮುಖ್ಯಸ್ಥರೊಂದಿಗೂ ಸಭೆ ನಡೆಸಿದ್ದೇನೆ. ಸರ್ಕಾರದ ತೀರ್ಮಾನವನ್ನು ವ್ಯವಸ್ಥಿತವಾಗಿ ಜಾರಿಗೆ ತರುತ್ತೇವೆ. ಅದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದವರಿಗೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಮುಕ್ತ ಅವಕಾಶವಿದೆ
ಒಂದುಕಡೆ ಕೋರ್ಟ್ ಆದೇಶ ಪಾಲಿಸಬೇಕಾಗಿದೆ, ಇನ್ನೊಂದೆಡೆ 20-22 ವರ್ಷಗಳಿಂದ ಹೋರಾಟ ನಡೆಸುತ್ತಿರುವ ನಾಗರಿಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲವನ್ನೂ ಸರಿದೂಗಿಸಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಹಾಗಾಗಿ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರಿಯಾದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.