ಭಾರತ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಚುನಾವಣೆಯಲ್ಲಿ ರಷ್ಯಾ ವಿರುದ್ಧ ಮೊದಲ ಬಾರಿ ಮತ ಚಲಾಯಿಸಿದೆ.
ಬುಧವಾರ ನಡೆದ ಸಭೆಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವುದನ್ನು ಮೊದಲ ಬಾರಿ ಭಾರತ ಅಧಿಕೃತವಾಗಿ ವಿರೋಧಿಸಿದೆ. 15 ಸದಸ್ಯರ ಸಮಿತಿ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡೊಮೈರ್ ಜೆಲೆನ್ ಸ್ಕಿ ವೀಡಿಯೊ ಕಾನ್ಫರೆನ್ಸ್ ಮೂಲಕ ಸನ್ನಿವೇಶವನ್ನು ವಿವರಿಸಿದರು.
ಉಕ್ರೇನ್ ಮೇಲಿನ ಯುದ್ಧದ ವಿಷಯದಲ್ಲಿ ಇದೇ ಮೊದಲ ಬಾರಿಗೆ ರಷ್ಯಾ ವಿರುದ್ಧ ಭಾರತ ಮತ ಚಲಾಯಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ದಾಳಿ ಆರಂಭವಾಗಿದ್ದು, ಇನ್ನೂ ನಡೆಯುತ್ತಲೇ ಇದೆ. ಇದರ ನಡುವೆ ಹಲವಾರು ಬಾರಿ ಮತದಾನ ನಡೆದರೂ ಭಾರತ ತಟಸ್ಥ ನಿಲುವು ತಳೆದಿತ್ತು.
ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ವಿರುದ್ಧ ಅಮೆರಿಕ, ಇಂಗ್ಲೆಂಡ್, ಸ್ಪೇನ್ ಸೇರಿದಂತೆ ಹಲವು ದೇಶಗಳು ಆರ್ಥಿಕ ದಿಗ್ಭಂಧನ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಘೋಷಿಸಿದ್ದವು. ಆದರೆ ಭಾರತ ಇದೇ ಮೊದಲ ಬಾರಿ ರಷ್ಯಾ ವಿರುದ್ಧ ಧ್ವನಿ ಎತ್ತಿದೆ.