ದೇಶದ ಪ್ರಮುಖ ಖಾಸಗಿ ಟೀವಿ ಚಾನೆಲ್ ಆದ ಎನ್ ಡಿಟಿವಿಯನ್ನು ಖರೀದಿಸುವ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಡಲು ಗೌತಮ್ ಅದಾನಿ ಮುಂದಾಗಿದ್ದಾರೆ.
ದೇಶದ ಅತ್ಯಂತ ನೈಜ ಪತ್ರಿಕೋದ್ಯಮ ನಡೆಸುವ ಕೆಲವೇ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಎನ್ ಡಿಟಿವಿಯ ಶೇ.26ರಷ್ಟು ಷೇರು ಖರೀದಿಗೆ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ಸ್ ಪ್ರಸ್ತಾಪ ಮುಂದಿಟ್ಟಿದೆ.
ಪ್ರತಿ ಷೇರಿಗೆ 294ರೂ.ನಂತೆ ಶೇ.೩೬ರಷ್ಟು ಷೇರು ಖರೀದಿಗೆ ಅದಾನಿ ಗ್ರೂಪ್ ಎನ್ ಡಿಟಿವಿ ಮುಂದೆ ಪ್ರಸ್ತಾಪ ಮುಂದಿಟ್ಟಿದೆ ಎಂದು ಹೇಳಲಾಗಿದೆ.

ಈಗಾಗಲೇ ಸೀಮೆಂಟ್, ಕಲ್ಲಿದ್ದಲು ನಂತರ ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟಿರುವ ಅದಾನಿ ಗ್ರೂಪ್ ಇದೀಗ ಮಾಧ್ಯಮ ಲೋಕಕ್ಕೂ ಕಾಲಿಡಲು ಮುಂದಾಗಿದೆ.
ಎನ್ ಡಿಟಿವಿಯ ಪ್ರಮೋಷನ್ ಸಂಸ್ಥೆ ಆರ್ ಆರ್ ಆರ್ ಆರ್ ಎನ್ ಡಿಟಿವಿ ಮತ್ತು ವಿಸಿಪಿಎಲ್ ನಲ್ಲಿ ಶೇ.29.18ರಷ್ಟು ಪಾಲು ಹೊಂದಿದ್ದು, ಇದು ತಮ್ಮ ಪಾಲಿನ ಷೇರುಗಳನ್ನು ಅದಾನಿ ಗ್ರೂಪ್ ಗೆ ಮಾರಾಟ ಮಾಡುತ್ತಿದೆ ಎಂದು ಹೇಳಲಾಗಿದೆ.
ಆದರೆ ಎನ್ ಡಿಟಿವಿ ಈ ವದಂತಿಯನ್ನು ತಳ್ಳಿ ಹಾಕಿದ್ದು, ಆರ್ ಆರ್ ಆರ್ ಆರ್ ಮೂಲಕ ಎನ್ ಡಿಟಿವಿಯ ಯಾವುದೇ ಷೇರುಗಳು ಮಾರಾಟಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.