ತಂತ್ರಜ್ಞಾನ, ಜಗತ್ತು ಎಷ್ಟೇ ಮುಂದುವರೆದರೂ ಇನ್ನೂ ಕನಿಷ್ಠ ಮೂಲ ಸೌಕರ್ಯಗಳೇ ಇಲ್ಲದೆ ಜನರು ಬದುಕು ದೂಡುತ್ತಿರುವ ಹಲವು ಉದಾಹರಣೆಗಳು ಇಂದಿಗೂ ನಮಗೆ ಕಾಣಸಿಗುತ್ತವೆ. ಜೀವನಕ್ಕೆ ಅಗತ್ಯ ಸೌಲಭ್ಯಗಳು ದೊರಕದೇ ಪ್ರತಿನಿತ್ಯ ಕಷ್ಟಪಡುವ ಹಲವಾರು ಜನ ಇದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಬಿಜೆಪಿ ಶಾಸಕ ಹರ್ಷವರ್ಧನ್ ಕ್ಷೇತ್ರವಾದ ನಂಜನಗೂಡಿನ ದೇವರಾಯಶೆಟ್ಟಿಪುರದಲ್ಲಿ ಇದೆಂತಾ ಅವಸ್ಥೆ.
ಗ್ರಾಮೀಣ ಭಾಗದ ಪ್ರತೀ ಮನೆಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಕತ್ತಲೆಯಲ್ಲಿದ್ದ ಎಷ್ಟೋ ಗ್ರಾಮಗಳು ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ದೆಹಲಿ ಮತ್ತು ರಾಜ್ಯದ ಗದ್ದುಗೆಯಲ್ಲಿ ಕೂತಿರುವ ರಾಜಕಾರಣಿಗಳು ಹೇಳಿಕೊಳ್ಳುತ್ತಿದ್ಧಾರೆ. ಆದರೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿರುವ ದೇವರಾಯಶೆಟ್ಟಿಪುರದ ಗ್ರಾಮದಲ್ಲಿ ಮಾತ್ರ ಹಲವು ವರ್ಷಗಳಿಂದ ವಿದ್ಯುತ್ ಭಾಗ್ಯ ದೊರೆತಿಲ್ಲ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿರುವ ದೇವರಾಯಶೆಟ್ಟಿಪುರ ಗ್ರಾಮ 20 ಬಡ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಬೆಳಕೆ ಕಾಣದೇ ಕಂಗಾಲಾಗಿದ್ದಾರೆ. ಕಾಡಂಚಿನ ಗ್ರಾಮವಾದ ದೇವರಾಯಶೆಟ್ಟಿಪುರದಲ್ಲಿ ಮಕ್ಕಳಿಗೆ ಓದಲು ಮೇಣದ ಬತ್ತಿಯೇ ಆಧಾರ. ಕಾಡು ಪ್ರಾಣಿಯ ಕಾಟವು ಬೇರೆ. ವಿದ್ಯುತ್ ಇಲ್ಲ, ಸೀಮೆಎಣ್ಣೆಯು ದೊರೆಯುವುದು ಕಷ್ಟ. ಜನವಸತಿ ಇದ್ದರು ಕುಡಿಯುವ ನೀರಿಗು ಹಾಹಾಕಾರ ಎಂದು ಗ್ರಾಮದ ಜನರ ಅಳಲು.
![](https://pratidhvani.com/wp-content/uploads/2022/08/madikeri1-1601373532.jpg)
ಶಾಸಕರು ಗ್ರಾಮಕ್ಕೆ ಬಂದ ವೇಳೆ ಅರ್ಧ ಗಂಟೆ ವಿದ್ಯುತ್ ನೀಡಿದ್ದ ಅಧಿಕಾರಿಗಳು. ಶಾಸಕರು ಹೋದ ಬಳಿಕ ಗ್ರಾಮದ ಬೀದಿಗಳ ರಸ್ತೆಯ ವಿದ್ಯುತ್ ಕಟ್ ಮಾಡಿದ್ದಾರೆ. ಎಲ್ಲರಿಗು ಮನವಿ ಮಾಡಿದ್ರು ಯಾವುದೇ ಪ್ರಯೋಜನ ಇಲ್ಲ. ಮೂಲಭೂತ ವ್ಯವಸ್ಥೆಯು ಇಲ್ಲ ವಿದ್ಯುತ್ ಮೊದಲೇ ಇಲ್ಲ. ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಏನೇ ಆಗಲಿ ಶಾಸಕ ಹರ್ಷವರ್ಧನ್ ಅವರು ಶೀಘ್ರ ಈ ಹಳ್ಳಿಗೆ ಭೇಟಿ ನೀಡಿ ಸಮಸ್ಯೆ ಬಗೆಯರಿಸಬೇಕು ಎಂಬುದೇ ಪ್ರತಿಧ್ವನಿಯ ಆಶಯ.