ಅಮರನಾಥ ಯಾತ್ರೆಯ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಐಟಿಬಿಪಿ ಯೋಧರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಫ್ರಿಸ್ಲಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಮೇಳೆ ಬಸ್ ನದಿಗೆ ಉರುಳಿದ ಬಿದ್ದು ಪರಿಣಾಮ 6 ಮಂದಿ ಸಾವಿಗೀಡಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

39 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ಫೇಲ್ ಆದ ನಂತರ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ. ಯೋಧರು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಹೋಗುತ್ತಿದ್ದರು ಎಂದು ವರದಿಯಾಗಿದೆ. ಪೊಲೀಸ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಹೆಚಿನ ಯೋಧರಿಗೆ ಗಾಯಗಳಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿದೆ.