• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

‘ತ್ರಿವರ್ಣ ಇಲ್ಲದ ತಾಯಿ ಭಾರತಿʼ, ʼಸಾವರ್ಕರ್‌, ಶಿವಾಜಿಗೆ ಸುದೀಪ್‌ ವಂದನೆʼ: ಕನ್ನಡ ಸಾಧಕರ ವಂದೇ ಮಾತರಂ ವಿಡಿಯೋಗೆ ಅಪಸ್ವರ

Shivakumar A by Shivakumar A
August 16, 2022
in ಕರ್ನಾಟಕ, ಸಿನಿಮಾ
0
‘ತ್ರಿವರ್ಣ ಇಲ್ಲದ ತಾಯಿ ಭಾರತಿʼ, ʼಸಾವರ್ಕರ್‌, ಶಿವಾಜಿಗೆ ಸುದೀಪ್‌ ವಂದನೆʼ: ಕನ್ನಡ ಸಾಧಕರ ವಂದೇ ಮಾತರಂ ವಿಡಿಯೋಗೆ ಅಪಸ್ವರ
Share on WhatsAppShare on FacebookShare on Telegram

ADVERTISEMENT

ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ ಅವರು ʼವಿಶ್ವಭಾರತಿಗೆ ಕನ್ನಡದಾರತಿʼ ಶೀರ್ಷಿಕೆಯಡಿಯಲ್ಲಿ ʼವಂದೇ ಮಾತರಂʼ ವಿಡಿಯೋ ಸಾಂಗ್‌ ನಿರ್ಮಿಸಿದ್ದಾರೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ಈ ಹಾಡಿಗೆ ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ದನಿಯಾಗಿದ್ದಾರೆ. ಅನಂತನಾಗ್, ಶಿವರಾಜಕುಮಾರ್, ಸುದೀಪ್, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ, ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಸದ್ಯ ಈ ವಿಡಿಯೋ ಹಲವು ಕಾರಣಗಳಿಗೆ ಚರ್ಚೆಯನ್ನು ಸೃಷ್ಟಿಸಿದೆ. ಅದರಲ್ಲಿ ಮುಖ್ಯವಾದುದು ವಿಡಿಯೋದಲ್ಲಿ ಕಂಡು ಬರುವ ʼಹಿಂದುತ್ವʼದ ಹೇರಳ ಕುರುಹು. ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ಭಗವದ್ಗೀತೆ ಓದುತ್ತಿರುವುದು, ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಶಿವಾಜಿ, ಸಾವರ್ಕರ್‌ ರನ್ನು ಇರಿಸಿರುವುದು ಸೇರಿದಂತೆ ಹಿಂದುತ್ವವಾದದ ಪ್ರೀತಿಯ ಹಲವು ಸರಕುಗಳು ವಿಡಿಯೋ ಸಾಂಗ್‌ ನಲ್ಲಿ ಯಥೇಚ್ಛವಾಗಿದೆ. ಇದೇ ವಿಚಾರಕ್ಕೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.

ಬಹುತ್ವದ ಭಾರತವಲ್ಲ; ಹಿಂದುತ್ವದ ಹಿಂದೂರಾಷ್ಟ್ರ

ಇನ್ನು ವಿಡಿಯೋಗೆ ಬಂದರೆ, ಸಾವರ್ಕರ್‌, ಶಿವಾಜಿ ಮೊದಲಾದ ಬಲಪಂಥೀಯ ಹಿಂದುತ್ವ ಐಕಾನ್‌ ಗಳ ಫೋಟೋಗಳಿಗೆ ಕ್ಯಾಂಡಲ್‌ ಹಚ್ಚುವ ಸುದೀಪ್‌ ರೊಂದಿಗೆ ವಿಡಿಯೋ ಆರಂಭವಾಗೊಳ್ಳುತ್ತದೆ. ಹಸುವಿಗೆ ಅಂದರೆ ಗೋಮಾತೆಗೆ ಹುಲ್ಲು ತಿನ್ನಿಸುತ್ತಾ ಶಿವರಾಜ್ ಕುಮಾರ್‌ ಕಾಣಿಸಿಕೊಂಡರೆ, ಭಗವದ್ಗೀತೆಯನ್ನು ಓದುವ ಬಲಪಂಥೀಯ ಚಿಂತಕ ಎಸ್‌ ಎಲ್‌ ಭೈರಪ್ಪ ನಂತರ ಕಾಣಿಸಿಕೊಳ್ಳುತ್ತಾರೆ. ಜಗ್ಗೇಶ್‌, ರವಿಚಂದ್ರನ್‌, ರಮೇಶ್‌ ಅರವಿಂದ್‌ ಪುಷ್ಪ ನಮನ ಸಲ್ಲಿಸುವ ಭಾರತೆ ಮಾತೆಯ ಕೈಯಲ್ಲಿ ತಿರಂಗವೇ ಇಲ್ಲ ಬದಲಾಗಿ ಕೇಸರಿ ಧ್ವಜವಿದೆ. ರಾಮನ ನೆರಳಿನೊಂದಿಗೆ ಕಾಣಿಸಿಕೊಳ್ಳುವ ಅರ್ಜುನ್‌ ಸರ್ಜಾ, ದೇವಸ್ಥಾನದ ಆವರಣದಲ್ಲಿ ಹುಲಿವೇಶದೊಂದಿಗೆ ಕುಣಿಯುವ ರಿಷಬ್‌ ಶೆಟ್ಟಿ, ಪೌರ ಕಾರ್ಮಿಕನಿಗೆ ಕೇಸರಿ ಬಣ್ಣ ಬಳಿಯುವ ಗಣೇಶ್‌, ಹನುಮನ ಮುಂದೆ ವ್ಯಾಯಾಮ ಮಾಡುವ ಧ್ರುವ ಸರ್ಜಾ ಹೀಗೆ ಭಾರತ ಮಾತೆಗೆ ಗೌರವ ಸಲ್ಲಿಸುವ ವಿಡಿಯೋ ಎಂದು ನಿರ್ದೇಶಕರು ಚಾಕಚಕ್ಯತೆಯಿಂದ ಹಿಂದುತ್ವವಾದಿಗಳು ಬಯಸುವ ಹಿಂದೂರಾಷ್ಟ್ರದಲ್ಲಿ ಬರುವಂತಹ ಪರಿಕಲ್ಪನೆಯನ್ನಷ್ಟೇ ವಿಡಿಯೋದಲ್ಲಿ ತಂದಿದ್ದಾರೆ.

Shivaji and savrakar yavag freedom fighter aadru 😂🤭🤣

— ಕನ್ನಡಿಗ (@Kannadi91444649) August 14, 2022

ಭಾರತದ ಭವ್ಯ ಪರಂಪರೆಯನ್ನು ತೋರಿಸುತ್ತೇವೆ ಎಂದ ನಿರ್ದೇಶಕರು ಅಪ್ಪಿ ತಪ್ಪಿಯೂ ʼಬಹುತ್ವದ ಭಾರತದʼ ಸಣ್ಣ ಸುಳಿವನ್ನೂ ವಿಡಿಯೋದಲ್ಲಿ ತೋರಿಸದಂತೆ ಎಚ್ಚರಿಕೆ ವಹಿಸಿದಂತೆ ಕಾಣುತ್ತದೆ. ಕರ್ನಾಟಕದ ಬಹುತ್ವ ಪರಂಪರೆಯನ್ನೂ ಒಳಗೊಳ್ಳದ ವಿಡಿಯೋ, ಹಿಂದುತ್ವವಾದಿಗಳು ಒಪ್ಪದ ನಾಯಕರಾದ ಜವಾಹರ್‌ ಲಾಲ್‌ ನೆಹರೂ, ಡಾ. ಬಿಆರ್‌ ಅಂಬೇಡ್ಕರ್‌ ಮೊದಲಾದವರನ್ನು ಕಡೆಗಣಿಸಿದೆ. ಹೀಗೆ ಸಾಲು ಸಾಲು ಸಮಸ್ಯೆಗಳು ಈ ವಿಡಿಯೋದಲ್ಲಿದೆ. ಜಗ್ಗೇಶ್‌ ಅವರು ಹಿಂದುತ್ವವಾದಿ ಬಿಜೆಪಿಯವರು ಹಾಗಾಗಿ ಅವರು ನಿರ್ಮಿಸಿದ ವಿಡಿಯೋದಲ್ಲಿ ಇದು ಸಹಜವೆಂದೇನೋ ಒಪ್ಪಿಕೊಳ್ಳಬಹುದು, ಆದರೆ, ಉಳಿದ ನಟರಿಗೇನಾಗಿದೆ? ಅವರು ಏಕೆ ಒಂದು ಅಜೆಂಡಾದ ಪರವಾಗಿರುವ ವಿಡಿಯೋದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗಳನ್ನು ಸ್ವತಃ ಅವರ ಅಭಿಮಾನಿಗಳೇ ಎತ್ತುತ್ತಿದ್ದಾರೆ.

ಯೋವ್ ಇಲ್ಲಾದರೂ ಆ ಶಿವಾಜಿ ಪೋಟೋ ತೆಗಿರಪ್ಪ, ಬ್ರಿಟಿಶರ ವಿರುದ್ದ ಏನ್ ಹೋರಾಟ ಮಾಡಿದ್ದಾನೆ?
ಸ್ವಾತಂತ್ರ ಹೋರಾಟ ಏನಾದರೂ ಮಾಡಿದ್ದಾನಾ?

ಶಿವಾಜಿ ಸ್ವತಂತ್ರ ಹೋರಾಟಗಾರ ಆದಮೇಲೆ ನಮ್ಮ ಕನ್ನಡ ನಾಡಿನ ಹೆಮ್ಮೆ ಚಿಕ್ಕದೇವರಾಜ ಒಡೆಯರ್ ಸ್ವತಂತ್ರ ಹೋರಾಗಾರರು ಆಗಲ್ವಾ?

ತೂ ಅದೇನ್ ಅಂತ ಬೂಟು ನೆಕ್ತಿರೋ, ಏನಾದರೂ ಅರ‌್ತ ಇದಿಯಾ?

— ಮಹೇಶ್ ಎಸ್ ಆರ್ ಮೇಡಾಳ (@MaheshSRmedala) August 14, 2022

ಪುನೀತ್‌ ಇರಬೇಕಿತ್ತು ಎಂಬ ಅಪ್ಪು ಅಭಿಮಾನಿಗಳು

ಈ ನಡುವೆ ಬಹುತೇಕ ಎಲ್ಲಾ ಕನ್ನಡ ನಟರನ್ನು ಒಳಗೊಂಡಿರುವ ಈ ವಿಡಿಯೋದಲ್ಲಿ ಪುನೀತ್‌ ಅವರನ್ನು ಕಾಣದೆ ಅಪ್ಪು ಅಭಿಮಾನಿಗಳು ಮಿಸ್‌ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ನಟರು ಇರುವ ಈ ವಿಡಿಯೋದಲ್ಲಿ ಪುನಿತ್‌ ಅವರನ್ನು ನೆನಪಿಸುವಂತಹ ಏನಾದರೂ ಇರಬೇಕಿತ್ತು ಎಂದು ಅಪ್ಪು ಅಭಿಮಾನಿಗಳು ನೋವು ಹಂಚಿಕೊಂಡಿದ್ದಾರೆ.

Nice.. But Badly missing the legend Appu #ourboss Miss you appu boss

— Abhijit (@Abhijit47363674) August 14, 2022

ಯಶ್‌, ದರ್ಶನ್‌ ಏಕಿಲ್ಲ?

ಇನ್ನು ಕನ್ನಡದ ಪ್ರಮುಖ ನಟರಾದ ಯಶ್‌ ಹಾಗೂ ದರ್ಶನ್‌ ಕೂಡಾ ಇಲ್ಲದಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕನ್ನಡದ ನಟರ ವಿಡಿಯೋ ಎಂದಾಗ ಅವರನ್ನೂ ಒಳಗೊಳ್ಳಬೇಕಿತ್ತು. ಅವರಿಲ್ಲದ ಚಿತ್ರರಂಗವನ್ನು ಸಂಪೂರ್ಣ ಪ್ರತಿನಿಧಿಸಿದಂತೆ ಆಗುವುದಿಲ್ಲ ಎಂದು ಹಲವರು ಟೀಕಿಸಿದ್ದಾರೆ.

ಅತ್ಯದ್ಭುತವಾಗಿದೆ…. ಯಶ್ ಮತ್ತು ದರ್ಶನ್ ಇಲ್ಲದಿರುವ ಕೊರತೆ ಕಾಣುತ್ತಿದೆ, ಕನ್ನಡದ ಗೀತೆ ಯಾವುದಾದರೂ ಆಗಿದ್ದರೆ ತುಂಬಾ ಸಂತೋಷವಾಗುತ್ತಿತ್ತು

— Srinivasa Murthy B S (@smurthybs) August 14, 2022

ನಟಿಯರಿಗೆ ಅವಕಾಶವೇಕಿಲ್ಲ??

ಈ ವಿಡಿಯೋದಲ್ಲಿ ನಟರಿಗೆ ಮನ್ನಣೆ ನೀಡಲಾಗಿದೆಯೇ ಹೊರತು ಕನ್ನಡದ ಯಾವ ನಟಿಯರಿಗೂ ಅವಕಾಶ ನೀಡಲಾಗಿಲ್ಲ. ಅವರು ಯಾಕೆ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವುದಿಲ್ಲವೇ ಎಂಬ ಪ್ರಶ್ನೆಯೂ ನೆಟ್ಟಿಗರು ಕೇಳಿದ್ದಾರೆ.

ಒಟ್ಟಾರೆ, ಕನ್ನಡ ನಟರ ವಂದೇ ಮಾತರಂ ಗೀತೆಯು ನಿಜವಾದ ಭಾರತವನ್ನೂ ಪ್ರತಿನಿಧಿಸಿಲ್ಲ, ಇನ್ನೊಂದೆಡೆ ಕನ್ನಡ ಚಿತ್ರರಂಗವನ್ನೂ ಪ್ರತಿನಿಧಿಸಿಲ್ಲ. ಹೀಗಾಗಿ ಸಾಲು ಸಾಲು ಅಪಸ್ವರಗಳು ವಿಡಿಯೋ ಬಗ್ಗೆ ಎದ್ದಿವೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಿಸಿ ಓವೈಸಿ ಸಂದೇಹವನ್ನು ಸುಳ್ಳು ಮಾಡಿದ ನರೇಂದ್ರ ಮೋದಿ

Next Post

ಶಿವಮೊಗ್ಗ ಉದ್ವಿಗ್ನ : ಇಂದು ಶಾಲಾ-ಕಾಲೇಜುಗಳಿಗೆ ರಜೆ, ಕುವೆಂಪು ವಿವಿ ಪರೀಕ್ಷೆಗಳು ಮುಂದೂಡಿಕೆ!

Related Posts

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?
Top Story

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

by ಪ್ರತಿಧ್ವನಿ
December 19, 2025
0

ಬೆಂಗಳೂರು : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ(Winter Session 2025) ಅಭಿವೃದ್ದಿಯ ಚರ್ಚೆಯ ಬಿಟ್ಟು ಕಾಂಗ್ರೆಸ್‌ ನಾಯಕರು ಡಿನ್ನರ್‌ ಮೀಟಿಂಗ್‌ನಲ್ಲಿ ಮುಳುಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬ್ರೇಕ್‌ ಪಾಸ್ಟ್‌...

Read moreDetails
BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

December 19, 2025
Next Post
ಶಿವಮೊಗ್ಗ ಉದ್ವಿಗ್ನ : ಇಂದು ಶಾಲಾ-ಕಾಲೇಜುಗಳಿಗೆ ರಜೆ, ಕುವೆಂಪು ವಿವಿ ಪರೀಕ್ಷೆಗಳು ಮುಂದೂಡಿಕೆ!

ಶಿವಮೊಗ್ಗ ಉದ್ವಿಗ್ನ : ಇಂದು ಶಾಲಾ-ಕಾಲೇಜುಗಳಿಗೆ ರಜೆ, ಕುವೆಂಪು ವಿವಿ ಪರೀಕ್ಷೆಗಳು ಮುಂದೂಡಿಕೆ!

Please login to join discussion

Recent News

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?
Top Story

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

by ಪ್ರತಿಧ್ವನಿ
December 19, 2025
BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ
Top Story

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

by ಪ್ರತಿಧ್ವನಿ
December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್
Top Story

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

December 19, 2025
BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!