9 ಕಿ.ಮೀ. ಉದ್ದ ಹಾಗೂ 9 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜವನ್ನು ಸುಮಾರು 50 ಸಾವಿರ ನಾಗರಿಕರು ಹಿಡಿದು ವಿಶ್ವದಾಖಲೆ ಬರೆಯಲು ಸಜ್ಜಾಗಿದೆ. ಹುಬ್ಬಳ್ಳಿ- ಧಾರವಾಡ!
ಹೌದು ಸೋಮವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ವೇಳೆ 50 ಸಾವಿರ ಜನರು 9 ಕಿ.ಮೀ. ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ವಿಶ್ವದಾಖಲೆ ಬರೆಯಲಿದ್ದಾರೆ.
ಸಂತೋಷ್ ಲಾಡ್ ಫೌಂಡೇಷನ್ ನಿಂದ ಈ ಕಾರ್ಯಕ್ರಮ ನಡೆಯಲಿದ್ದು, ಕಾಂಗ್ರೆಸ್ ಸಂಸದ ಸಂತೋಷ್ ಲಾಡ್ ನೇತೃತ್ವ ವಹಿಸಿದ್ದಾರೆ.
2021 ಆಗಸ್ಟ್ 15ರಂದು ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ 2000 ಮೀ. ಉದ್ದದ ರಾಷ್ಟ್ರಧ್ವಜ ನಿರ್ಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿತ್ತು.
2022 ಆಗಸ್ಟ್ 15ರಂದು 9000 ಮೀ. ಅಂದರೆ ಸುಮಾರು 9 ಕಿ.ಮೀ. ಉದ್ದದ ಬೃಹತ್ ರಾಷ್ಟ್ರಧ್ವಜ ಅನಾವರಣಗೊಳ್ಳಲಿದ್ದು, ಇದು ವಿಶ್ವದಾಖಲೆಗೆ ಪಾತ್ರವಾಗಲಿದೆ.
ಕಲಘಟಗಿ ತಾಲೂಕಿನ ಅಲ್ನಾವರ್ ನಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದು, ಐತಿಹಾಸಿಕ ದಾಖಲೆಯಲ್ಲಿ ಪಾಲ್ಗೊಳ್ಳಲಿದ್ದಾರೆ.