ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ರಾಮನಗರ ರಾಜಕೀಯ ಹೆಚ್ಚು ಸದ್ದು ಮಾಡುತ್ತಿದ್ದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಅಶ್ವತ್ಥನಾರಾಯಣ ವಿರುದ್ದ ಮಾತಿನ ಸಮರ ಮುಂದುವರೆದಿದೆ.
ಹೆಚ್.ಡಿ.ಕುಮಾರಸ್ವಾಮಿರವರು ಅಧಿಕಾರ ಇದ್ದ ಸಮಯದಲ್ಲಿ ಕೆಲಸ ಮಾಡುವ ಬದಲು ಕಣ್ಣೀರು ಸುರಿಸಿದರೆ ಏನು ಪ್ರಯೋಜನ ಅವರ ಕಣ್ಣೀರು ಭಾವನಾತ್ಮಕ ಅಲ್ಲ ಬರೀ ನಾಟಕವಷ್ಟೇ ಎಂದು ಸಚಿವ ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಫೈವ್ ಸ್ಟಾರ್ ಹೋಟೆಲ್ನಲ್ಲಿ ಇದ್ದುಕೊಂಡು ಸರ್ಕಾರ ನಡೆಸುತ್ತಿದ್ದ ವಿಚಾರವಾಗಿ ಇಲ್ಲಿಯವರೆಗೂ ಉತ್ತರ ಕೊಡಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇನ್ನು ಹೈಕೋರ್ಟ್ ಎಸಿಬಿಯನ್ನು ರದ್ದುಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವತ್ಥನಾರಾಯಣ ನಾವು ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸುತ್ತೇವೆ ಆದಷ್ಟು ಬೇಗ ನಮ್ಮ ಸರ್ಕಾರ ಹಾಗೂ ಪಕ್ಷದ ನಿಲುವನ್ನು ತಿಳಿಸುತ್ತೇವೆ ಎಂದಿದ್ದಾರೆ.