ಶನಿವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಪೈಕಿ ಕೆಲವು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಿದ್ದು ದುರದೃಷ್ಟಕರ ಸಂಗತಿ ಎಂದು ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ(84) ಬೇಸರಿಸಿದ್ದಾರೆ.
ಶನಿವಾರ ಸಂಜೆ ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಆಳ್ವಾ ನೂತನ ಉಪರಾಷ್ಟ್ರಪತಿ ಜಗದೀಪ್ ಧನಕರ್ಗೆ ಶುಭ ಹಾರೈಸಿದ್ದಾರೆ ಹಾಗೂ ತಮ್ಮಗೆ ಮತ ನೀಡಿದ ವಿಪಕ್ಷಗಳ ಸಂಸದರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯೂ ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಸಿಕ್ಕಿದ ಒಂದು ಅನುಭವ. ಹಳೆಯದನ್ನು ಮರೆತು ಪರಸ್ಪರ ಭಾಂದ್ಯವಗಳನ್ನು ಗಟ್ಟಿಗೊಳಿಸಲು ಸಿಕ್ಕಿದ್ದ ಒಂದು ಸುಸಂದರ್ಭ. ಆದರೆ, ಕೆಲವು ಪಕ್ಷಗಳು ಪ್ರತ್ಯಕ್ಚವಾಗಿ ಹಾಗೂ ಪರೀಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದು ದುರದೃಷ್ಟಕರ. ಇದರ ಮೂಲಕ ವಿಪಕ್ಷಗಳ ಒಗಟ್ಟನ್ನು ಒಡೆಯಲು ಯತ್ನಿಸಿದ್ದು ವಿಷಾದನೀಯ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಬೆಂಬಲಿಸುವ ಮೂಲಕ ಕೆಲವು ಪ್ರತಿಪಕ್ಷಗಳ ನಾಯಕರು ತಮ್ಮ ಘನತೆಗೆ ಹಾನಿ ಮಾಡಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿ ಬೇಸರಿಸಿದ್ದಾರೆ.
ಈ ಚುನಾವಣೆ ಮುಗಿದಿದೆ ಆದರೆ, ಪ್ರಜಾಪ್ರಭುತ್ವ, ಸಂವಿಧಾನದ ಹಾಗೂ ಸಂಸತ್ತಿನ ರಕ್ಷಣೆ ಹಾಗೂ ಘನತೆಯನ್ನು ಮರುಸ್ಥಾಪಿಸಲು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.