ಭಾರತದ ಪುರುಷ ಕುಸ್ತಿಪಟು ನವೀನ್ ಶನಿವಾರ ಕಾಮನ್‌ವೆಲ್ತ್ ಗೇಮ್ಸ್‌ನ 74 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ತಡರಾತ್ರಿ ನಡೆದ 74 ಕೆ.ಜಿ. ವಿಭಾಗದಲ್ಲಿ ನವೀನ್ ಪಾಕಿಸ್ಥಾನದ ತಾಹಿರ್ ಮುಹಮ್ಮದ್ ಶರೀಫ್ ಅವರನ್ನು ಮಣಿಸಿ ಸಂಭ್ರಮಿಸಿದರು.
ಈ ಮೂಲಕ ನವೀನ್ ಮಲಿಕ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 12ನೇ ಚಿನ್ನದ ಪದಕವನ್ನು ತಂದುಕೊಟ್ಟರು.