ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ನಡೆಯಲಿರುವ ದಸರಾದ ಜಂಬೂಸವಾರಿಗೆ ಅಂಬಾರಿ ಹೊರಲಿರುವ ಅಭಿಮನ್ಯು ಸೇರಿದಂತೆ 14 ಗಜಪಡೆಗಳ ಪಟ್ಟಿ ಅಂತಿಮಗೊಂಡಿದೆ.
ದಸರಾ ಜಂಬೂಸವಾರಿಗೆ 4 ಹೆಣ್ಣಾನೆ ಸೇರಿದಂತೆ 14 ಆನೆಗಳ ಪಟ್ಟಿ ಅಂತಿಮಗೊಳಿಸಲಾಗಿದ್ದು, ಆಗಸ್ಟ್ 7ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೀಕಿನ ದೊಡ್ಡ ಹೆಜ್ಜೂರು ಗ್ರಾಮದ ವೀರನಹೊಸಹಳ್ಳಿ ಅರಣ್ಯ ಪ್ರದೇಶಲ್ಲಿ ಗಜಪಡೆ ಪ್ರಯಾಣ ಆರಂಭಿಸಲಿದೆ.

ಮತ್ತಿಗೋಡು ಶಿಬಿರದಿಂದ 39 ವರ್ಷದ ಗೋಪಾಲಸ್ವಾಮಿ, 57 ವರ್ಷದ ಅಭಿಮನ್ಯು, 22 ವರ್ಷದ ಭೀಮ, ಬಳ್ಳೆ ಶಿಬಿರದಿಂದ 63 ವರ್ಷದ ಅರ್ಜುನ, ದುಬಾರೆಯಿಂದ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ಕಾವೇರಿ 41 ಗೋಪಿ, 40 ಶ್ರೀರಾಮ, 63 ವಿಜಯಾ ಆಯ್ಕೆಯಾಗಿವೆ.
ರಾಮಾಪುರ ಆನೆ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮೀ, 18 ವರ್ಷದ ಪಾರ್ಥ ಸಾರಥಿ ಆನೆಯಗಳನ್ನು ಆಯ್ಕೆ ಮಾಡಲಾಗಿದ್ದು, ಮೊದಲ ಹಂತದಲ್ಲಿ 9 ಆನೆಗಳು ಗಜ ಪ್ರಯಾಣ ಆರಂಭಿಸಲಿವೆ ಎಂದು ಮೂಲಗಳು ತಿಳಿಸಿವೆ.