ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 56ನೇ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಕೊನೆಗೂ ತೆರೆ ಬಿದ್ದಿದೆ.
ಹೌದು, ನಟ ದರ್ಶನ್ ಜೊತೆ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ರಾಧನ ರಾಮ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ನಿನ್ನೆ ಡಿ56 ಚಿತ್ರತಂಡ ನಾಯಕಿ ಘೋಷಣೆ ಬಗ್ಗೆ ಪೋಸ್ಟರ್ ಹೊರಡಿಸಿದಾಗ ದರ್ಶನ್ ಅಭಿಮಾನಿಗಳು ಹಲವು ಹೆಸರುಗಳನ್ನು ಕಮೆಂಟ್ ಮಾಡಿದ್ದರು. ಆದರೆ ಚಿತ್ರತಂಡ ಎಲ್ಲರಿಗೂ ಅಚ್ಚರಿ ನೀಡುವಂತೆ ನಿರ್ಮಾಪಕ ರಾಮು ಮತ್ತು ಮಾಲಾಶ್ರೀ ಅವರ ಪುತ್ರಿ ರಾಧನ ರಾಮ್ ಅವರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದೆ.
ಈ ಕುರಿತು ನಟಿ ಮಾಲಾಶ್ರೀ ಟ್ವೀಟ್ ಮಡಿದ್ದು “ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ. ಎಂದು ಟ್ವೀಟ್ ಮಾಡಿದ್ದಾರೆ.
D56 ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ವರಮಹಾ ಲಕ್ಷ್ಮಿ ಹಬ್ಬದ ಪ್ರಯುಕ್ತ ನಾಯಕಿ ಹೆಸರು ಸಹ ಅನಾವರಣಗೊಂಡಿದೆ.