ಮತ ಕೇಳುವಾಗ ನಿಮ್ಮ ಸ್ವಂತ ಹೆತ್ತವರ ಫೋಟೊ ಬಳಸಿ. ಬೇರೆಯವರದ್ದು ಅಲ್ಲ ಎಂದು ಬಾಳಸಾಹೇಬ್ ಠಾಕ್ರೆ ಫೋಟೊ ಬಳಸಿಕೊಂಡು ಶಿವಸೇನೆ ತಮ್ಮದು ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ತಿರುಗೇಟು ನೀಡಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿ ನಡೆಯಲು ಆಗದ ಸ್ಥಿತಿಯಲ್ಲಿ ಇದ್ದಾಗ ನಮ್ಮವರೇ ನಮಗೆ ಬೆನ್ನಿಗೆ ಚೂರಿ ಹಾಕಿದರು. ನಾನು ಅಸಹಾಯಕನಾಗಿದ್ದಾಗ ಹೀಗೆ ಮಾಡಿದ್ದಾರೆ. ಅವರು ಬೇರೆಯವರ ಫೋಟೊ ಬಳಸುವ ಬದಲು ಮತ ಕೇಳುವಾಗ ತಮ್ಮ ಸ್ವಂತ ಹೆತ್ತವರ ಫೋಟೊ ಬಳಸಿ ಎಂದು ಹೇಳಿದ್ದಾರೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಏಕನಾಥ್ ಶಿಂಧೆ ಹಾಗೂ ಬಂಡಾಯ ಶಾಸಕರ ವಿರುದ್ಧ ಕಠಿಣ ಶಬ್ಧಗಳಲ್ಲಿ ತರಾಟೆಗೆ ತೆಗೆದುಕೊಂಡಿರುವ ಅವರು, ನಮ್ಮ ಸರಕಾರ ಹೋಯಿತು. ಇದಕ್ಕಾಗಿ ನನಗೆ ಬೇಸರವಿಲ್ಲ. ಆದರೆ ನಮ್ಮದೇ ಜನರು ವಂಚಿಸಿದ್ದು ನೋವಾಗಿದೆ. ನಾನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾಗ ನನ್ನ ಸರಕಾರವನ್ನು ಬೀಳಿಸಿದರು ಎಂದು ಅವರು ಹೇಳಿದರು.
ಈಗ ಬಂಡಾಯ ಘೋಷಿಸಿ ಪಕ್ಷದಿಂದ ಹೊರಗೆ ಹೋದವರು ಮರದದಲ್ಲಿ ಒಣಗಿದ ಎಲೆಗಳು. ಅವು ಉದುರುವುದು ಸಹಜ. ಇದರಿಂದ ಹೊಸ ಎಲೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೆಲವು ನಾನು ಬೇಗ ಗುಣವಾಗಲಿ ಎಂದು ಹಾರೈಸುತ್ತಿದ್ದರೆ, ಇನ್ನು ಕೆಲವರು ನಾನು ಚೇತರಿಸಿಕೊಳ್ಳದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.