ರಾಜ್ಯದ ಪ್ರಸಿದ್ಧ ಹೃದ್ರೋಗ ಆಸ್ಪತ್ರೆಗಳಲ್ಲಿ ಒಂದಾದಂತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಾಲಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ರವರ ಅವಧಿ ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಹೊಸ ನಿರ್ದೇಶಕರ ನೇಮಕ ಮಾಡಲು ರಾಜ್ಯ ಸರ್ಕಾರ ಆದೇಶ ಹೊಡಿಸಿದ ಬೆನ್ನಲ್ಲೇ ಡಾ.ಮಂಜುನಾಥ್ರನ್ನೇ ಮುಂದುವರಿಸುವಂತೆ ಅನೇಕ ಗಣ್ಯರು ಆಸ್ಪತ್ರೆ ಸಿಬ್ಬಂದಿಗಳು ಸರ್ಕಾರ ಒತ್ತಡ ತಂದ ಪರಿಣಾಮ ರಾಜ್ಯ ಸರ್ಕಾರ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಸೇವಾವಧಿ ವಿಸ್ತರಿಸಿ ಆದೇಶ ಹೊಡಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನಾಳೆ ನಿವೃತ್ತಿಯಾಗಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶದ ಡಾ.ಮಂಜುನಾಥ್ ಅವರ ಸೇವಾವಧಿಯನ್ನು ಮುಂದಿನ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಆದೇಶ ಪತ್ರ ಹೊರಡಿಸಿದೆ.

ಸುಧಾಮೂರ್ತಿ, ಕಾಂಗ್ರೆಸ್, ಮತ್ತು ರಾಜ್ಯದ ಅನೇಕ ವೈದ್ಯರು ಸೇರಿದಂತೆ ಹಲವು ಗಣ್ಯರು ಮಂಜುನಾಥ್ ಅವರನ್ನೇ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಮುಂದುವರೆಸಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.