ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ 23, 25 ಹಾಗೂ 35 ವಯಸ್ಸಿನ ವರ್ಷದ ಮೂವರನ್ನು ಬಂಧಿಸಿದ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಜುಲೈ 6-7ರ ಮಧ್ಯರಾತ್ರಿ ಸಂತ್ರಸ್ತ ಬಾಲಕಿ ತನ್ನ ಇಬ್ಬರು ಸ್ನೇಹಿತರನ್ನು ಬೇಟಿಯಾಗಲು ತೆರಳಿದ್ದ ಸಮಯದಲ್ಲಿ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 8ರಂದು ಬೆಳಗಿನ ಜಾವ ವಸಂತ್ ವಿಹಾರ್ ಪೊಲೀಸ್ ಠಾಣೆಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಮೂವರು ವ್ಯಕ್ತಿಗಳು ಬಾಲಕಿಗೆ ಕಿರುಕುಳ ನೀಡುತ್ತಿರುವುದಾಗಿ ಕರೆ ಮಾಡಿ ತಿಳಿಸಿದ್ದರು ಎಂದು ಎಸಿಪಿ(ನೈಋತ್ಯ) ಮನೋಜ್ ತಿಳಿಸಿದ್ದಾರೆ.

ಬಾಲಕಿಯ ತಂದೆ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದು ಜುಲೈ 6ರಂದು ರಾತ್ರಿ 8:30ರ ಸುಮಾರಿಗೆ ಬಾಲಕಿ ಮೂವರು ಆರೋಪಿಗಳ ಜೊತೆ ಕಾರಿನಲ್ಲಿ ತೆರಳಿದ್ದು ಜುಲೈ 6ರಂದು ಬೆಳಗಿನ ಜಾವ 6 ಘಂಟೆಗೆ ವಾಪಸ್ಸಾಗಿದ್ದಾರೆ.
ಬಾಲಕಿ ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷೆ ನಂತರ ಸಂತ್ರಸ್ತೆಯು ಜುಲೈ 6ರಂದು ರಾತ್ರಿ ಸುಮಾರು 8:30ರ ಸುಮಾರಿಗೆ ತನ್ನ ಇಬ್ಬರು ಸ್ನೇಹಿತರು ವಸಂತ್ ವಿಹಾರ ಮಾರುಕಟ್ಟೆ ಬಳಿ ಭೇಟಿಯಾದ ಸಮಯದಲ್ಲಿ ಜಾಲಿರೈಡ್ಗೆ ಆಹ್ವಾನ ನೀಡಿದ್ದರು.
ನಂತರ ಮತ್ತೋರ್ವ ವ್ಯಕ್ತಿ ತನ್ನ ಕಾರಿನಲ್ಲಿ ಸ್ಥಳಕ್ಕೆ ಬಂದ ನಂತರ ಕಾರಿನಲ್ಲಿ ತೆರಳಿದ ನಾಲ್ವರು ಮಹಿಪಾಲಪುರದಲ್ಲಿ ಮಧ್ಯ ಸೇವಿಸಿದ್ದಾರೆ. ನಂತರ ಅಜ್ಞಾತ ಸ್ಥಳಕ್ಕೆ ತೆರಳಿದ ನಾಲ್ವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚರ ಎಸಗಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಬಾಲಕಿಯ ಹೇಳಿಕೆಯನ್ನು ಆಧರಿಸಿ ಪೋಕ್ಸೋ ಕಾಯ್ದೆ ಮತ್ತು ಸಂಬಂಧಿತ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.