ಸಹೋದರನಿಂದಲೇ ಚಾಕು ಇರಿತಕ್ಕೆ ಒಳಗಾಗಿದ್ದ ಮಾಜಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪತಿ ಆಯುಬ್ ಖಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಾಮರಾಜಪೇಟೆಯ ಬಿಬಿಎಂಪಿ 139 ವಾರ್ಡ್‍ನ ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯುಬ್ ಖಾನ್ ಮೇಲೆ ಸಹೋದರನೇ ಚಾಕುವಿನಿಂದ ಇರಿದಿದ್ದ. ಆಯೂಬ್ ಗೆ ಸಹೋದರ ಮನೋ ಇಚ್ಛೆ ಇರಿದಿದ್ದರಿಂದ ಹೊಟ್ಟೆ ಹಾಗೂ ಮೂತ್ರ ವಿಸರ್ಜನಾ ಸಂಚಿ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಸತತವಾಗಿ ರಕ್ತಸ್ರಾವವಾಗುತ್ತಿತ್ತು.

ಘಟನೆ ನಡೆದ ಕೂಡಲೇ ಆಯುಬ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮುಂಜಾನೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಆರೋಪಿ ಪತ್ತೆಗಾಗಿ ಚಾಮರಾಜಪೇಟೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಆಯುಬ್ ಖಾನ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೂರು ಡಿ.ಆರ್ ಪೊಲೀಸ್ ವಾಹನ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.






