ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಿ ಸೇರಿದಂತೆ 14 ವಿದ್ಯಾರ್ಥಿಗಳು 100ಕ್ಕೆ 100 ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.
ಕರ್ನಾಟಕ ಮೂಲದ ಬೋಯಾ ಹರೇನ್ ಸಾತ್ವಿಕ್ 14 ಮಂದಿ ಟಾಪರ್ಗಳ ಪೈಕಿ ಒಬ್ಬರು. ತೆಲಂಗಾಣ 4, ಆಂಧ್ರಪ್ರದೇಶ 3, ಅಸ್ಸಾಂ, ರಾಜಸ್ಥಾನ, ಹರ್ಯಾಣ, ಜಾರ್ಖಂಡ್, ಪಂಜಾಬ್ ಹಾಗೂ ಉತ್ತರಪ್ರದೇಶದಿಂದ ತಲಾ ಒಬ್ಬ ವಿದ್ಯಾರ್ಥಿ ಟಾಪರ್ ಆಗಿದ್ದಾರೆ.
ಒಟ್ಟು 8.72 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು ಮತ್ತು 7.69ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2.2ಲಕ್ಷ ಜನ ಹುಡುಗಿಯರು 5.47 ಲಕ್ಷ ಜನ ಹುಡುಗರು ಹಾಗು ಮೂವರು ತೃತೀಯ ಲಿಂಗಿಗಳು ಪರೀಕ್ಷೆಗೆ ಹಾಜರಾಗಿದ್ದರು.
ದೇಶಾದ್ಯಂತ ಒಟ್ಟು 407 ನಗರಗಳಲ್ಲಿ, 588 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತ್ತು. ಭಾರತ ಸೇರಿದಂತೆ ಮನಾಮ, ದೋಹಾ, ದುಬೈ, ಕಠ್ಮಂಡು, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ, ಕುವೈತ್ ಸಿಟಿ, ಕೌಲಾಲಂಪುರ್, ಲಾಗೋಸ್/ಅಬುಜಾ, ಕೊಲಂಬೊ, ಜಕಾರ್ತಾ, ವಿಯೆನ್ನಾ, ಮಾಸ್ಕೋ, ಪೋರ್ಟ್ ಲೂಯಿಸ್ ಮತ್ತು ಬ್ಯಾಂಕಾಕ್ನಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ಅಸ್ಸಾಮಿ, ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದುವಿನಲ್ಲಿ ನಡೆಸಲಾಗಿತ್ತು.