ಪಂಜಾಬ್ ಪೊಲೀಸರಿಂದ ಮಾದಕ ದ್ರವ್ಯ ವಿರೋಧಿ ಅಭಿಯಾನ ಪ್ರಾರಂಭಿಸಿದ್ದು, ಕಳೆದ ಏಳು ದಿನಗಳಲ್ಲಿ ರಾಜ್ಯಾದ್ಯಂತ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯಡಿ 559 ಎಫ್ಐಆರ್ಗಳನ್ನು ದಾಖಲಿಸಿ, 676 ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಈ ವೇಳೆ ಪೊಲೀಸರು 5.57 ಕೆಜಿ ಹೆರಾಯಿನ್, 17 ಕೆಜಿ ಅಫೀಮು, 25 ಕೆಜಿ ಗಾಂಜಾ, 7 ಕ್ವಿಂಟಾಲ್ ಗಸಗಸೆ ಸಿಪ್ಪೆ ಮತ್ತು 2.25 ಲಕ್ಷ ಮಾದಕ ಮಾತ್ರೆಗಳು ಮತ್ತು ಕ್ಯಾಪ್ಸುಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಂಜಾಬ್ ಪೊಲೀಸರ ವಕ್ತಾರರು, ಸಿಎಂ ಭಗವಂತ್ ಮಾನ್ ಅವರು ಪಂಜಾಬ್ ಪೊಲೀಸರಿಗೆ ಡ್ರಗ್ಸ್ ವಿರುದ್ಧ ಸಮರ ಸಾರಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದರೊಂದಿಗೆ, ಡ್ರಗ್ಸ್ ಹಾವಳಿಯನ್ನು ತೊಡೆದುಹಾಕಲು ವ್ಯಾಪಕವಾದ ಡ್ರಗ್ ವಿರೋಧಿ ಡ್ರೈವ್ಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.