ಇಂಗ್ಲೆಂಡ್ ಮತ್ತು ಭಾರತ ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿನ ಪ್ರದರ್ಶನಗಳು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿವೆ. ಈ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‌ಗಳಿಂದ ಗೆದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅತ್ಯಧಿಕ ಯಶಸ್ವೀ ಚೇಸಿಂಗ್ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಆ ಚೇಸ್‌ನ ವೀರರಾದ ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಇಬ್ಬರೂ ಈಗ ಟಾಪ್ 10 ಬ್ಯಾಟ್ಸ್ ಮ್ಯಾನ್ ರ್ಯಾಂಕಿಂಗ್‌ನಲ್ಲಿದ್ದಾರೆ. ರೂಟ್ ಶ್ರೇಯಾಂಕದ ಅಗ್ರಸ್ಥಾನದಲ್ಲಿದ್ದರೆ ಬೈರ್‌ಸ್ಟೋವ್ 11ನೇ ಸ್ಥಾನದಿಂದ 10 ನೇ ಸ್ಥಾನವನ್ನು ಜಿಗಿದಿದ್ದಾರೆ.
ಭಾರತದ ರಿಷಭ್ ಪಂತ್ ಕೂಡ ಮೊದಲ ಇನ್ನಿಂಗ್ಸ್ ಪಂದ್ಯದಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿಸಿ 10 ಬ್ಯಾಟ್ಸ್ ಮ್ಯಾನ್ ರ್ಯಾಂಕಿಂಗ್‌ನಲ್ಲಿ 5 ನೇ ಸ್ಥಾನಕ್ಕೇರಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಕಳೆದುಕೊಂಡತ್ತೆ ಕಾಣುತ್ತಿದ್ದು, ಟೆಸ್ಟ್‌ನಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ 11 ಮತ್ತು 20 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾದರು. ಇದರಿಂದಾಗಿ ಟಾಪ್ 10ರ ಪಟ್ಟಿಯಿಂದ ಹೊರಬಿದ್ದಿದ್ದು, ಇದೀಗ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಟಾಪ್ 10 ರಿಂದ ಹೊರಗುಳಿದಿರುವುದು ಇದೇ ಮೊದಲು.

ಪಂದ್ಯದಿಂದ ಹೊರಗುಳಿದಿರುವ ಭಾರತದ ನಾಯಕ ರೋಹಿತ್ ಶರ್ಮಾ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.