ಉಚ್ಚಾಟಿತ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ಬೆಂಬಲಿಸುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಸಲುವಾಗಿ ಕೆಮಿಸ್ಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮುಖ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಪ್ರಕರಣವನ್ನ ಕೇಂದ್ರ ಗೃಹ ಇಅಲಖೆಯೂ ರಾಷ್ಟ್ರೀಯಾ ತನಿಖಾ ಸಂಸ್ಥೆಗೆ ತನಿಖೆ ನಡೆಸುವಂತೆ ಆದೇಶಿಸಿತ್ತು.

ಹತ್ಯೆಯ ಪ್ರಮುಖ ಆರೋಪಿ ಇರ್ಫಾನ್ ಖಾನ್(32) ನನ್ನು ನಿನ್ನೆ ಸಂಜೆ ನಾಗ್ಪುರದಲ್ಲಿ ಬಂಧಿಸಿದ್ದರು. ಜೂನ್ 21ರಂದು ರಾತ್ರಿ 10 ಘಂಟೆಗೆ ಪ್ರಹ್ಲಾದ್ರಾವ್ ಕೊಲ್ಹೆರನ್ನು ಆರೋಪಿಗಳು ಇರಿದು ಕೊಲೆ ಮಾಡಿದ್ದರು.
ಘಟನೆ ಸಂಬಂಧ ಈಗಾಗಲೇ ಶೇಖ್ ಇಬ್ರಾಹಿಂ(22), ಶಾರುಖ್ ಪಠಾಣ್(25), ಅಬ್ದುಲ್ ತೌಫಿಕ್(24), ಶೋಬ್ ಖಾನ್(22), ಆದಿಲ್ ರಶೀದ್(22), ಯುಸೂಫ್ ಖಾನ್(44) ಬಂಧಿತ ಆರೋಪಿಗಳು.