ಝೀ ಟಿವಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಡಿಟರ್ ಇನ್ ಚೀಫ್ ಸ್ಥಾನಕ್ಕೆ ಸುಧೀರ್ ಚೌಧರಿ ರಾಜೀನಾಮೆ ನೀಡಿದ್ದು, ತಮ್ಮದೇ ನೇತೃತ್ವದ ಹೊಸ ಸಂಸ್ಥೆ ಆರಂಭಿಸಲಿದ್ದಾರೆ ಎನ್ನಲಾಗಿದೆ.
ಝೀ ಮೀಡಿಯಾ ಕಾರ್ಪೊರೇಷನ್ ನಲ್ಲಿ ದಶಕದಿಂದ ಝೀ ಟಿವಿಯ ಮುಖ್ಯಸ್ಥ ಸ್ಥಾನ ಅಲಂಕರಿಸಿದ್ದ ಸುಧೀರ್ ಚೌಧರಿ, 2003ರಲ್ಲಿ ಸಹಾರಾ ಸಮಯ್ ಸೇರಿದ್ದರು. ಅಲ್ಲದೇ ಇಂಡಿಯಾ ಟಿವಿಯಲ್ಲಿ ಸ್ವಲ್ಪ ಸಮಯ ಸೇವೆ ಸಲ್ಲಿಸಿದ್ದರು. ಆದರೆ 2012ರಲ್ಲಿ ಮತ್ತೆ ಮಾತೃಸಂಸ್ಥೆಗೆ ಮರಳಿದ್ದರು.
ಸುಧೀರ್ ಚೌಧರಿ ಹಿಂದಿ ನ್ಯೂಸ್ ಚಾನೆಲ್ ನಲ್ಲಿ ಡೈಲಿ ನ್ಯೂಸ್ ಅಂಡ್ ಅನಾಲಿಸಸ್ ಶೋ ನಡೆಸಿಕೊಡುತ್ತಿದ್ದರು.