ಮುಂಬರುವ ಕಾಮನ್ ವೆಲ್ತ್ ಕ್ರೀಡಾಕೂಟ-2022ಕ್ಕೆ 18 ಸದಸ್ಯರ ಪೂರ್ಣ ಸಾಮರ್ಥ್ಯದ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಮನ್ ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಡ್ರ್ಯಾಗ್ ಫ್ಲಿಕ್ಕರ್ ಹರ್ಮನ್ ಪ್ರೀತ್ ಸಿಂಗ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಗೋಲ್ ಕೀಪರ್ ಆಗಿ ಪಿ.ಆರ್. ಶ್ರೀಜೇಶ್ ಕಾರ್ಯ ನಿರ್ವಹಿಸಲಿದ್ದಾರೆ.
ಹಾಕಿ ಇಂಡಿಯಾ ಸೋಮವಾರ ಪೂರ್ಣ ಸಾಮರ್ಥ್ಯದ ತಂಡವನ್ನು ಪ್ರಕಟಿಸಿದ್ದು, ಭಾರತ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ತಂಡಗಳಿವೆ.
2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 4ನೇ ಸ್ಥಾನ ಪಡೆದಿತ್ತು. ಭಾರತ ಏಷ್ಯನ್ ಗೇಮ್ಸ್ ದೃಷ್ಟಿಯಿಂದ ಎರಡನೇ ದರ್ಜೆ ತಂಡ ಪ್ರಕಟಿಸುವ ಉದ್ದೇಶ ಹೊಂದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಪೂರ್ಣ ಸಾಮರ್ಥ್ಯದ ತಂಡ ಪ್ರಕಟಿಸಿದೆ.

ಭಾರತ ತಂಡ:
ಗೋಲ್ ಕೀಪರ್: ಪಿಆರ್ ಶ್ರೀಜೇಶ್, ಕೃಷನ್ ಬಹದ್ದೂರ್, ಪಾಠಕ್
ರಕ್ಷಣೆ: ವರುಣ್ ಕುಮಾರ್, ಸುರೇಂದರ್ ಕುಮಾರ್, ಹರ್ಮನ್ ಪ್ರೀತ್ ಸಿಂಗ್ (ಉಪನಾಯಕ), ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್, ಜರ್ಮನ್ ಪ್ರೀತ್ ಸಿಂಗ್.
ಸಂಪರ್ಕ: ಮನ್ ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶ್ ದೀಪ್ ಸಿಂಗ್, ನೀಲಕಂಠ ಶರ್ಮ.
ಮುನ್ಪಡೆ: ಮಂದೀಪ್ ಸಿಂಗ್, ಗುಜರಾತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್.













