ಅಗ್ನಿಪಥ್ ರಕ್ಷಣಾ ನೇಮಕಾತಿ ನೀತಿಯ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಹಲವು ನಿರ್ಧಾರಗಳು ಮೊದಲಿಗೆ ಅನ್ಯಾಯವಾಗಿ ಕಂಡರೂ ನಂತರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದ್ದಾರೆ.

ಬೆಂಗಳೂರಗೆ ಎರಡು ದಿನಗಳ ಪ್ರವಾದಲ್ಲಿರುವ ಮೋದಿ ಅವರು ಸಾರ್ವಜನಿಕ ಭಾಷಣದಲ್ಲಿಮಾತನಾಡಿ, “ಪ್ರಸ್ತುತ ಹಲವಾರು ನಿರ್ಧಾರಗಳು ಅನ್ಯಾಯವಾಗಿ ಕಾಣುತ್ತಿವೆ. ಕಾಲಾನಂತರದಲ್ಲಿ ಈ ನಿರ್ಧಾರಗಳು ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ” ಎಂದು ಹೇಳಿದರು. ಆದಾಗ್ಯೂ, ಪ್ರಧಾನಿಯವರು ತಮ್ಮ ಭಾಷಣದಲ್ಲಿ ಯೋಜನೆಯ ಬಗ್ಗೆ ಯಾವುದೇ ನೇರ ಉಲ್ಲೇಖವನ್ನು ಮಾಡಲಿಲ್ಲ.












