ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದ ಕನ್ನಡದ ಬಹುನಿರೀಕ್ಷಿತ ಚಿತ್ರ 777 ಚಾರ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿಯನ್ನ ಘೋಷಿಸಿ ಆದೇಶ ಹೊರಡಿಸಿದೆ.
ಸ್ವತಃ ಚಿತ್ರ ವೀಕ್ಷಿಸಿದ ಮುಖ್ಯಮಂತ್ರಿಗಳೇ ಭಾವುಕರಾಗಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು. ಇನ್ನು ತೆರಿಗೆ ವಿನಾಯಿತಿ ನೀಡುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ನಿರ್ಮಾಕ ರಕ್ಷಿತ್ ಶೆಟ್ಟಿ ಕೋರಿಕೆಗೆ ಅಸ್ತು ಎಂದಿದ್ದಾರೆ.
ಕರ್ನಾಟಕದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನ ಘೋಷಿಸಿ ಆದೇಶ ಹೊರಡಿಸಿದೆ. ಇನ್ನುಮುಂದೆ ಚಿತ್ರಮಂದಿರಗಳಲ್ಲಿ GST ವಿನಾಯಿತಿ ಇರುವ ಟಿಕೆಟ್ಗಳನ್ನೆ ಮಾರಾಟ ಮಾಡಬೇಕು ಮತ್ತು ಇಲ್ಲಿಯವರೆಗು ಕಳೆದ ಒಂದು ವಾರದಿಂದ ಪಾವತಿಯಾಗಿರುವ ತೆರಿಗೆಯನ್ನು ಹಿಂತಿರುಗಿಸುವಂತೆ ಪತ್ರದಲ್ಲಿ ಆದೇಶಿಸಿದೆ.
