ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪರಿಷ್ಕರಿಸಿರುವ ಪಠ್ಯ ಪುಸ್ತಕ ರದ್ದು ಆಗ್ರಹಿಸಿ ಶನಿವಾರ ಪಾರ್ಕ್ ನಲ್ಲಿ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ದ ಒಕ್ಕೊರಲಲ್ಲಿ ಅಗ್ರಹಿಸಿದವು.
ರಾಜ್ಯಾದ್ಯಂತ ವಿವಾದ ಭುಗಿಲೆದ್ದಿದು ಪರಿಷ್ಕೃತ ಪಠ್ಯವನ್ನ ಹಿಂಪಡೆಯುವಂತೆ ಆಗ್ರಹಿಸಿ ಶನಿವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ದ ಒಕ್ಕೊರಲ ಧ್ವನಿ ಮೊಳಗಿಸಿವೆ.
ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ.ಇಬ್ರಾಹಿಂ, ಮುಖ್ಯಮಂತ್ರಿ ಚಂದ್ರು, ಹಂಸಲೇಖ, ಶಾಸಕರಾದ ಸಿ.ಎನ್. ಬಾಕೃಷ್ಣ, ಎಂ.ಕೃಷ್ಣಪ್ಪ ಸೌಮ್ಯ ರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಈ ಹೋರಾಟಕ್ಕೆ ನನ್ನ ಬೆಂಬಲ ಸಂಪೂರ್ಣವಾಗಿ ಇದೆ ಎಂದು ಹೇಳಿದ್ದಾರೆ. ಈ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪಬೇಕು ಸಮಿತಿಯವರು ಎಲ್ಲಿಗೆ ಕರೆದರು ನಾನು ಬರಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ನಾನು ಈ ಹೋರಾಟವನ್ನ ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಹಳ್ಳಿ ಹಳ್ಳಿಗು ಈ ಹೋರಾಟವನ್ನ ಕೊಂಡೊಯುತ್ತೇವೆ. ಪರಿಷ್ಕೃತ ಪಠ್ಯವನ್ನ ಈ ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರ ಬಂದಾಗ ಈ ಪಠ್ಯಗಳನ್ನು ಕಿತ್ತು ಎಸೆಯಬೇಕಾಗುತ್ತದೆ ಎಂದು ಪರಿಷ್ಕೃತ ಪಠ್ಯವನ್ನ ಹರಿದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಸಮಿತಿ ಮತಿಯಿಂದ ನಾಲ್ಕು ಹಕ್ಕೊತ್ತಾಯಗಳನ್ನು ಮಂಡಿಲಾಯಿತ್ತು
1) ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ಕೂಡಲೇ ಹಿಂಪಡೆಯಬೇಕು
2) ಈ ಹಿಂದೆ ಪಠ್ಯವನ್ನ ಪರಿಷ್ಕರಿಸಿದ್ದ ಬರಗೂರು ರಾಮವಂದ್ರಪ್ಪ ನೇತೃತ್ವದ ಪಠ್ಯವನ್ನ ಮುಂದುವರೆಸಬೇಕು
3) ರೋಹಿತ್ ಚಕ್ರತೀರ್ಥ ವಿರುದ್ದ ನಾಡದ್ರೋಹ ಹಾಗು ರಾಷ್ಟ್ರದ್ರೋಹದಡಿ ಪ್ರಕರಣವನ್ನ ದಾಖಲಿಸಿ ಬಂಧಿಸಬೇಕು.
4) ಸಚಿವ ಬಿ.ಸಿ.ನಾಗೇಶ್‌ರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಸಭೆಯಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತ್ತು.
ಪ್ರತಿಭಟನಾ ಸಬೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಬಹುಜನ ಸಮಾಜವಾದಿ ಪಕ್ಷ, ದಲಿತ ಸಂಗಟನೆಗಳು, ಸಿಎಫ್‌ಐ, ಎಸ್‌ಡಿಪಿಐ, ಎಎಪಿ, ಕೆಆರ್‌ಎಸ್ ಪಕ್ಷದ ಮಮುಖಂಡರು ಭಾಗಿಯಾಗಿದ್ದರು.













