ಮೂವರು ಬ್ಯಾಟ್ಸ್ ಮನ್ ಗಳು ಸಿಡಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿದ ವಿಶ್ವದಾಖಲೆ ಬರೆದಿದೆ.
ಅಮ್ಸಟೇಲ್ವಿನ್ ನಲ್ಲಿ ಶುಕ್ರವಾರ ನಡೆದ ನೆದರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 498 ರನ್ ಪೇರಿಸಿತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತವಾಗಿದೆ.

2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ 451 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದ ಇಂಗ್ಲೆಂಡ್ ತನ್ನದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಿತು.
ಇಂಗ್ಲೆಂಡ್ ಪರ ಫಿಲ್ ಸಾಲ್ಟ್ (122), ಡಾವಿಡ್ ಮಲಾನ್ (125) ಹಾಗೂ ನಾಯಕ ಜೋಸ್ ಬಟ್ಲರ್ (ಅಜೇಯ 162) ರನ್ ಹೊಳೆ ಹರಿಸಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು.