ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಮತ ಎಣಿಕೆ ವೇಳೆ ಕೊಳವಿಬಾವಿ ತೊಡಿಸಿಕೊಡಿ ಅಂಥ ಯುವಕನೊಬ್ಬ ಮತಪೆಟ್ಟಿಗೆ ಪತ್ರ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಾನು ಎಂ.ಎ ಬಿ.ಎಡ್ ಮಾಡಿದ್ದೇನೆ. ಆದರೆ ನನಗೆ ಕೆಲಸ ಇಲ್ಲ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ ಇಲ್ಲ ಅಂದರೆ ಜಮೀನಿನಲ್ಲಿ ಕೊಳವೆಬಾವಿ ತೊಡಿಸಿಕೊಡಿ ಎಂದು ಮನವಿ ಪತ್ರ ಹಾಕಿದ್ದಾರೆ.
ಒದೇ ವೇಳೆ ಪೆಟ್ರೋಲ್ ಬೆಲೆ ಇಳಿಸಿ, ರಸಗೊಬ್ಬರ ಬೆಲೆ ಕಡಿಮೆ ಮಾಡಿ ಎಂದು ಪತ್ರ ಬರೆದು ಬ್ಯಾಲೆಟ್ ಪೇಪರ್ ಜೊತೆಗೆ ಮತದಾರರು ಪತ್ರ ಹಾಕಿರುವುದು ಪತ್ತೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬ ಮತದಾರನಿಂದ ಪತ್ರ ಬಂದಿದೆ.
ಮತ ಪೆಟ್ಟಿಯೊಳಗಡೆ ವಿಭಿನ್ನ ಕೊರಿಕೆಯ ಪತ್ರಗಳನ್ನ ಮತದಾರರು ಹಾಕಿದ್ದಾರೆ. ಇದೇ ವೇಳೆ ಇನ್ನು ಕೆಲವರು ಬ್ಯಾಲೆಟ್ ಪತ್ರ ಮೇಲೆಯೇ ಅಭ್ಯರ್ಥಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬರೆದಿದ್ದಾರೆ.
ಯಾವ ಅಭ್ಯರ್ಥಿಗಳು ಹಣ ಕೊಟ್ಟಿಲ್ಲ ಎಂದು ಬ್ಯಾಲೆಟ್ ಪೇಪರ್ ಮೇಲೆ ಮತ್ತೊಬ್ಬ ಮತದಾರ ಬರೆದಿದ್ದಾನೆ.












