ಪ್ರೀತಿ ಎಂತಹವರನ್ನು ಸಹ ಕುರುಡು ಮಾಡಿಬಿಡುತ್ತದೆ ಅದು ಎಷ್ಟರ ಮಟ್ಟಿಗೆ ಎಂದರೆ ಕಲೆವೊಮ್ಮೆ ಪ್ರಾಣ ಕಳೆದುಕೊಳ್ಳುವ ಹಂತಕ್ಕು ಸಹ ಯೋಚನೆಯನ್ನ ಮಾಡಿರುತ್ತಾರೆ. ಇದೀಗ ಪ್ರೇಮ ಪ್ರಕರಣವೊಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು ಕುರುಡು ಪ್ರೀತಿಯ ಮುಂದೆ ಪೋಷಕರ ಪ್ರೀತಿಯು ಸಹ ಗೌನವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ತಾನು ಪ್ರೀತಿಸಿದವನ ಜೊತೆ ಓಡಿ ಹೋಗಿ ಮದುಇವೆಯಾದ ಯುವತಿಗೆ ಯುವಕನೊಂದಿಗೆ ಇರಲು ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್ ಮುಂದೊಂದು ದಿನ ನೀನು ಮಾಡಿದ ಕಾರ್ಯ ನಿನ್ನ ಮಕ್ಕಳಿಂದ ನಿನ್ನಗೆ ಹಿಂತಿರುಗುತ್ತದೆ ಎಂದು ಎಚ್ಚರಿಕೆಯನ್ನ ನೀಡಿದೆ.
ಜಿ. ಮಾದೇಗೌಡ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ ನಿಸರ್ಗ ಕಾಣೆಯಾಗಿದ್ದಾಳೆಂದು ಆರೋಪಿಸಿ ಯುವತಿಯ ತಂದೆ ಮಳವಳ್ಳಿ ತಾಲ್ಲೂಕಿನ ನಿವಾಸಿಯಾದ ಟಿ.ಎಲ್.ನಾಗರಾಜು ಹೇಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ತಮ್ಮ ಮಗಳನ್ನು ವಾಹನ ಚಾಲಕನಾಗಿರುವ ನಿಖಿಲ್ ಊರುಫ್ ಅಭಿ ಎಂಬ ಯುವಕನ್ನು ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ವೀರಪ್ಪ ಹಾಗು ನ್ಯಾ. ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಪ್ರೇಮಿಗಳಿಬ್ಬರನ್ನು ಹಾಜರುಪಡಿಸಲಾಯಿತ್ತು. ಯುವತಿ ಏಪ್ರಿಲ್ 28, 2003ರಂದು ಜನಿಸಿದ್ದು ಅವರ ವಯಸ್ಸಿನ ಪ್ರಕಾರ ಮೇಜರ್ ತಾನು ಸ್ವಯಂಪ್ರೇರಿತಳಾಗಿ ಯುವಕನೊಂದಿಗೆ ಹೋಗಿರುವುದಾಗಿ ತನ್ನನು ಯಾರು ಬಲವಂತ ಮಾಡಿಲ್ಲ ಎಂದು ಯುವತಿ ನ್ಯಾಯಾಲಯದ ಮುಂದೆ ಹೇಳಿದ್ದಾಳೆ.
ಪೋಷಕರ ವಿರೋಧದ ನಡುವೆ ಈ ಎರಡು ಜೋಡಿಗಳು ಮೇ 13ರಂದು ಮದುವೆಯಾಗಿದ್ದರು. ಯುವತಿಯು ತಾನು ತನ್ನ ಪತಿಯ ಜೊತೆ ಇರಲು ಬಯಸಿರುವುದಾಗಿ ತಿಳಿಸಿದ್ದಳು ಮತ್ತು ತನ್ನ ಪೋಷಕರ ಬಳಿ ವಾಪಸ್ ಹೋಗದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾಳೆ.

ಯುವಕ ನಿಖಿಲ್ ಯುವತಿ ವ್ಯಸಂಗ ಮಾಡುತ್ತಿರುವ ಕಾಲೇಜಿನಲ್ಲಿ ವ್ಯಾನ್ ಚಾಲಕನಾಗಿದ್ದನ್ನು. ಯುವತಿಯನ್ನು ಹಾಸ್ಟೆಲ್ನಿಂದ ಕಾಲೇಜಿಗೆ ಬಿಡುವ ಸಮಯದಲ್ಲಿ ಪರಿಚಯವಾಗಿ ಪರಿಚಯ ಪ್ರೇಮವಾಗಿ ತಿರುಗಿ ಇಬ್ಬರು ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದಾರೆ.
ಯುವತಿಯ ತಂದೆಯ ದೂರಿನ ಮೇರೆಗೆ ಇಬ್ಬರನ್ನು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಲಾಗಿತ್ತು. ಆದರೆ, ದೂರುದಾರರು ತನ್ನ ಮಗಳೊಂದಿಗೆ ಮಾತನಾಡಲು ಬಿಡಲಿಲ್ಲ ಮತ್ತು ತನ್ನ ಮಗಳು ಯೋಚಿಸುವ ಮನಸ್ಥಿತಿಯಲ್ಲಿರದ ಕಾರಣ ಬಲವಂತದ ಮದುವೆ ಮಾಡಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಮುಂದೆ ಹಾಜರಾದ ನವದಂಪತಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ವಾದ ಪ್ರತಿವಾದವನ್ನು ಆಲಿಸಿದ ನಂತರ ಭಾರತ ಸಂವಿಧಾನ 21ರ ಪರಿಚ್ಚೇದದ ಪ್ರಕಾರ ೊಬ್ಬ ವ್ಯಕ್ತಿಗೆ ತಾನು ಇಷ್ಟಪಡುವವರೊಂದಿಗೆ ಮದುವೆಯಾಗುವ ಹಕ್ಕಿದೆ ಎಂದು ಹೇಳಿದೆ.
ಮುಂದುವರೆದು, ನಮ್ಮ ದೇಶದ ಸಂವಿಧಾನವು ಬದುಕುವ ಹಕ್ಕನ್ನು ಕಲ್ಪಿಸಿಕೊಡುತ್ತದೆ. ಈ ಹಕ್ಕನ್ನು ವಸ್ತುನಿಷ್ಠವಾಗಿ ಮತ್ತು ಕಾರ್ಯವಿಧಾನವಾಗಿ ನ್ಯಾಯೋಚಿತವಾದ, ನ್ಯಾಯಸಮ್ಮತವಾದ ಮತ್ತು ಸಮಂಜಸವಾದ ಕಾನೂನಿನ ಮೂಲಕ ಹೊರತುಪಡಿಸಲಾಗುವುದಿಲ್ಲ. ಈಗ ನೀನು ನಿನ್ನ ತಂದೆ ತಾಯಿಗೆ ಮಾಡಿದ ಕಾರ್ಯ ಮುಂದೊಂದು ದಿನ ನಿನ್ನ ಮಕ್ಕಳೆ ನಿನ್ನಗೆ ಹಿಂತಿರುಗಿಸಿ ಕೊಡುತ್ತಾರೆ ಎಂದು ಎಚ್ಚರಿಸಿ ಜೊತೆಗೆ ಬಾಳುವಂತೆ ಹೇಳಿದೆ.