ವಿಶ್ವ ಯೋಗ ದಿನಾರಣೆಗೆ ಪ್ರಧಾನಿ ಮೋದಿ ಸೇರಿ ಇನ್ನಿತರೆ ಗಣ್ಯರನ್ನು ಆಹ್ವಾನಿಸಿದ ರಾಜ್ಯ ಸರ್ಕಾರ, ಯದುವಂಶದವರಿಗೆ ಆಹ್ವಾನ ನೀಡಿಲ್ಲ ಎಂಬ ಸುದ್ದಿ ರಾಜ್ಯಾಂಧ್ಯಂತ ಚರ್ಚೆಯಾಗಿ ಸಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾದ ಬಳಿಕ ಮೈಸೂರು – ಮಡಿಕೇರಿ ಸಂಸದ ಪ್ರತಾತ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಸ್ಪಷ್ಟನೆ ನೀಡಿರುವ ಸಂಸದ ಪ್ರತಾಪಸಿಂಹ, ನಾನು ಹೇಳಿರುವುದು ಜನಪ್ರತಿನಿಧಿಗಳ ವಿಚಾರ. ಗಣ್ಯರ ಪಟ್ಟಿ ಇನ್ನು ಸಿದ್ದವಾಗುತ್ತಿದೆ. ನಮ್ಮ ಮೈಸೂರು ಮಹಾರಾಜರ ಕೊಡುಗೆ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ. ಮಹಾರಾಜರು ರಾಜಮಾತೆ ಯತಿಗಳು ಮೈಸೂರಿನಲ್ಲಿ ಇದ್ದಾರೆ. ಗಣ್ಯರ ಪಟ್ಟಿ ಇನ್ನು ಅಂತಿಮವಾಗಿಲ್ಲ. ವೇದಿಕೆಯ ಜನಪ್ರತಿನಿಧಿಗಳ ಬಗ್ಗೆ ಮಾತ್ರ ನಾನು ಅಂದು ಸಂದರ್ಭಕ್ಕೆ ಹೇಳಿದ್ದು, ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಮೈಸೂರು ಮಹಾರಾಜರನ್ನು ಬಿಟ್ಟು ಕಾರ್ಯಕ್ರಮ ಎಂಬುದು ಗಾಳಿ ಸುದ್ದಿ ಇದಕ್ಕೆ ಯಾರು ಕಿವಿ ಕೊಡಬೇಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಸ್ಪಷ್ಟನೆ ನೀಡಿದ್ದಾರೆ.






