ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ಸತತ ಎರಡನೇ ದಿನವು ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ನೀಡಿರುವುದರ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀ ಮಾಡಿ ಕಿಡಿಕಾರಿದೆ.
ಈಗಾಗಲೇ ಮುಗಿದಿರುವ ಪ್ರಕರಣವನ್ನ ಕೆದಕಿ ಮುನ್ನೆಲೆಗೆ ತರುವ ಮೂಲಕ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ೆಂದು ಆರೋಪಿಸಿದೆ.
ಈಗಾಗಲೇ ಮುಗಿದಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಬಿಜೆಪಿ, ಈ ದಶಕದ ಅತಿದೊಡ್ಡ ಹಗರಣ ಪಿಎಂ ಕೇರ್ ಫಂಡ್ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ? ED ನೋಟಿಸ್ ಯಾಕೆ ನರೇಂದ್ರ ಮೋದಿ ಹಾಗ ಅಮಿತ್ ಶಾಗೆ ಯಾವಾಗ ತಲುಪಲಿದೆ? ಜನರ ಹಣದ ಸರಿಯಾದ ಲೆಕ್ಕ ಯಾವಾಗ ಬಹಿರಂಗ ಪಡಿಸುತ್ತೀರಿ? ಎಂದು ಪ್ರಶ್ನಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸುಮಾರು 10 ಘಂಟೆಗೂ ಹೆಚ್ಚು ಕಾಲ ಇಡಿ ಡ್ರಿಲ್ ನಡೆಸಿತ್ತು. ಮಂಗಳವಾರವು ಸಹ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಇನ್ನು ರಾಹುಲ್ಗೆ ಹಾಗೂ ಸೋನಿಯಾಗೆ ನೋಟಿಸ್ ನೀಡಿದ ಸಂಬಂಧ ದೇಶಾದ್ಯಂತ ಕಾಂಗ್ರೆಸ್ ನಾಯಕರು ಪ್ರತಿಭಟಿಸಿ ಆಕ್ರೋಶವನ್ನ ಹೊರಹಾಕಿದ್ದರು. ಹಲವು ನಾಯಕರು ಇನ್ನು ಪೊಲೀಸರ ವಶದಲ್ಲಿದ್ದಾರೆ.