ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಅಂತಾನೇ ಕರೆಯಿಸಿಕೊಂಡಿರುವ ಪುಟ್ಟಣ್ಣ ಕಣಗಾಲ್ ಅಣ್ಣನ ಮಗ, ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್, ಇಂದು ಅಮೆರಿಕಾದ ತಮ್ಮ ಮಗಳ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪುರುಷೋತ್ತಮ ಕಣಗಾಲ್ ಅವರಿಗೆ 69 ವಯಸ್ಸಾಗಿತ್ತು. ಅವರು ಹೆಸರಾಂತ ಸಾಹಿತಿಯಾಗಿರುವ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ ಪುರುಷೋತ್ತಮ ಕಣಗಾಲ್ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತ ರಚನೆ ಮಾಡಿದ್ದಾರೆ.












