ಗೋವಾದಿಂದ ಹೈದರಾಬಾದ್ಗೆ ತೆರಳುತ್ತಿದ್ದ ಖಾಸಗಿ ಬಸ್ಗೆ ಬೆಂಕಿಗಾಹುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರ ಮೊತ್ತವನ್ನ ಘೋಷಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ರಾಮುಲು ಖಾಸಗಿ ಬಸ್ ಅಗ್ನಿಗಾಹುತಿ ಪ್ರಕರಣದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಬಸ್ನಲಿ ಸುಮಾರು 35ಕ್ಕು ಹೆಚ್ಚು ಪ್ರಯಾಣಿಕರಿದ್ದರು ಸ್ಥಳಕ್ಕೆ ಅಧಿಕಾರಿಗಳ ತಂಡವನ್ನ ಕಳುಹಿಸಿದ್ದೇವೆ,
ತನಿಖೆ ನಡೆಯುತ್ತಿರುವುದರಿಂದ ವರದಿ ಕೈ ಸೇರಿದ ನಂತರ ಏನಾಗಿದೆ ಎಂಬುದರ ಬಗ್ಗೆ ತಿಳಿಯಲಿದೆ. ಖಾಸಗಿ ಬಸ್ ಆಗಿರುವುದರಿಂದ ಪರಿಹಾರ ಘೋಷಣೆ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಂತರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಒಂದು ಖಾಸಗಿ ಬಸ್ ಕಂಪನಿ ಕಡೆಯಿಂದ ನಿಯಮ ಉಲ್ಲಂಘನೆಯಾಗಿರುವುದು ತಿಳಿದು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.