ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಸ್ ಫೇಸ್ಬುಕ್ (Facebook) ಮತ್ತು ಇನ್ಸ್‌ಸ್ಟಾಗ್ರಾಮ್ (Instagram ) ನಲ್ಲಿ ದ್ವೇಷ ಭಾಷಣಗಳು ಏರಿಕೆಯಾಗಿದೆ ಎಂದು ತನ್ನ ಪೋಷಕ ಕಂಪನಿ ಮೆಟಾ ಸಂಸ್ಥೆ ಮೇ 31 ರಂದು ಬಿಡುಗಡೆಯಾದ ವರದಿಯಲ್ಲಿ ತಿಳಿಸಿದೆ.
ಹೌದು, ಈ ಕುರಿತು ಪೋಷಕ ಕಂಪನಿ ಮೆಟಾ ಬಿಡುಗಡೆ ಮಾಡಿದ ಮಾಸಿಕ ವರದಿಯಲ್ಲಿ, ಎಪ್ರಿಲ್ನಲ್ಲಿ 53,200 ದ್ವೇಷ ಭಾಷಣ ಪ್ರಕರಣಗಳನ್ನು ಫೇಸ್ಬುಕ್ ಪತ್ತೆಹಚ್ಚಿದೆ. ಇದೇ ರೀತಿ 77,000 ಹಿಂಸಾಚಾರ ಮತ್ತು ಪ್ರಚೋದನೆ-ಸಂಬಂಧಿತ ವಿಷಯಗಳ ಕುರಿತು Instagram ಪತ್ತೆಹಚ್ಚಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಫೇಸ್ಬುಕ್ನಲ್ಲಿ ಸುಮಾರು 37.82% ರಷ್ಟು ದ್ವೇಷ ಭಾಷಣಗಳು ಏರಿಕೆಯಾಗಿದ್ದು, Instagram ನಲ್ಲಿ 86% ಹಿಂಸಾತ್ಮಕ ಮತ್ತು ಪ್ರಚೋದನಕಾರಿ ವಿಷಯಗಳಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ವರದಿಯ ಪ್ರಕಾರ, ಫೇಸ್ಬುಕ್ ಏಪ್ರಿಲ್ನಲ್ಲಿ 53,200 ದ್ವೇಷದ ಭಾಷಣಗಳನ್ನು ಪತ್ತೆಹಚ್ಚಿದೆ, ಇದು ಮಾರ್ಚ್ನಲ್ಲಿ ಪತ್ತೆಯಾದ 38,600 ಕ್ಕೆ ಹೋಲಿಸಿದರೆ 37.82% ಹೆಚ್ಚಾಗಿದೆ.
Instagram ಮಾರ್ಚ್ನಲ್ಲಿ 41,300 ಹಿಂಸಾಚಾರ ಮತ್ತು ಪ್ರಚೋದನೆ-ಸಂಬಂಧಿತ ವಿಷಯಗಳನ್ನು ಪತ್ತೆಹಚ್ಚಲಾಗಿದೆ. ಆದರೆ ಏಪ್ರಿಲ್ನಲ್ಲಿ 77,000 ಹಿಂಸಾಚಾರ ಮತ್ತು ಪ್ರಚೋದನೆ-ಸಂಬಂಧಿತ ವಿಷಯಗಳನ್ನು ಪತ್ತೆಹಚ್ಚಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ಹೋಲಿಸಿ ನೋಡಿದರೆ ಏಪ್ರಿಲ್ನಲ್ಲಿ 86% ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

“ನಮ್ಮ ಮಾನದಂಡಗಳಿಗೆ ವಿರುದ್ಧ ನಡೆದಿರುವವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ (ಪೋಸ್ಟ್ಗಳು, ಫೋಟೋಗಳು, ವೀಡಿಯೊಗಳು ಅಥವಾ ಕಾಮೆಂಟ್ಗಳಂತಹ) ವಿಷಯದ ತುಣುಕುಗಳ ಸಂಖ್ಯೆಯನ್ನು ನಾವು ಅಳೆಯುತ್ತೇವೆ. ಈ ಮೆಟ್ರಿಕ್ ನಮ್ಮ ಜಾರಿ ಚಟುವಟಿಕೆಯ ಪ್ರಮಾಣವನ್ನು ತೋರಿಸುತ್ತದೆ ಎಂದು ಮೆಟಾ ಹೇಳಿಕೊಂಡಿದೆ.
ಯಾವುದೇ ಸಮುದಾಯಕ್ಕೆ ಮುಜಿಗರ ತರುವಂತ ಮಾನಹರಣವಾಗುವಂತ ಕಂಟೆಂಟ್ ಅನ್ನು ನಾನು ಕವರ್ ಮಾಡಲಾಗುತ್ತದೆ ಅಥಾವ ಹೆಚ್ಚರಿಕೆ ನೀಡಿ ಅಳಿಸಲಾಗುತ್ತದೆ ಎಂದು ಹೇಳಿಕೊಂಡಿದೆ.