ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಪಠ್ಯ ಪರಿಷ್ಕರಣೆ ವಿವಾದ ಭುಗಿಲೆದ್ದು, ಒಂದಲ್ಲ ಒಂದು ವಿಚಾರ ಚರ್ಚೆಗೆ ಕಾರಣವಾಗುತ್ತಿದೆ. ರಾಷ್ಟ್ರ ಕವಿ ಕುವೆಂಪುಗೆ ಅವಮಾನಮಾಡಲಾಗಿದೆ ಅಂತ ಹಲವರು ಧ್ವನಿ ಎತ್ತುತ್ತಿರುವ ಬೆನ್ನಲೇ ಜಗಜ್ಯೋತಿ ಬಸವಣ್ಣನ ಪಠ್ಯ ಪರಿಷ್ಕರಣೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಸವಣ್ಣ ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು. ಶೈವ ಗುರುಗಳ ಸಾನ್ನಿಧ್ಯದಲ್ಲಿ ಬಸವಣ್ಣನವರು ಲಿಂಗದೀಕ್ಷೆ ಪಡೆದರು. ಬಸವಣ್ಣ ನವರು ವೀರಶೈವ ಲಿಂಗಾಯತ ಮತ ಅಭಿವೃದ್ಧಿ ಪಡಿಸಿದ್ದರು. ಉಪನಯನ ಮಾಡಿಕೊಳ್ಳಲಿಲ್ಲ , ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದ್ರಾ? ಎಂಬ ವಿಚಾರ ಚರ್ಚೆಗೆ ಕಾರಣವಾದ ಖುಡಲೇ . 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಕೂಡಲೇ ತಡೆಯುವಂತೆ ತರಬಾಳುವಿನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಹೌದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿರುವಂತ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಅದು ಬದಲಾಯಿಸಿರುವ ಪಠ್ಯಕುರಿತು ಸಾಕಷ್ಟು ಆಕ್ಷೇಪಗಳು, ಆಪಾದನೆಗಳು ಕೇಳಿಬರುತ್ತಿವೆ. ಈಗಿನ ಪಠ್ಯ ಸಮಿತಿಯಲ್ಲಿವುವವರು ಒಂದು ವರ್ಗಕ್ಕೆ ಸೇರಿದವೆಂಬುದು ಮೇಲ್ಮೋಟಕ್ಕೆ ಎದ್ದು ತೋರುವುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿಯದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಠಿಯುಳ್ಳವರು ಪಠ್ಯರಚನಾ ಸಮಿತಿಯಲ್ಲಿರಬೇಕಾದದ್ದು ಆಪೇಕ್ಷಣೀಯ. ಅಲ್ಲಿ ಜಾತಿ, ಪಕ್ಷ ರಾಜಕಾರಣ ಹೆಡೆಯಾಡಬಾರದು ಎಂದಿದ್ದಾರೆ.
ವಾಟ್ಸಾಪ್ ನಲ್ಲಿ ನಾವು ನೋಡಿರುವಂತೆ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ( ಪರಿಷ್ಕೃತ -2022) ಭಾಗ-1ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದ್ರೇ ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷದ ಪಾಠದಲ್ಲಿ ಅನೇಕ ಮಹತ್ವದ ಅಂಶಗಳನ್ನೇ ತೆಗೆದುಹಾಕಿ ತಮಕೆ ಬೇಕಾದಂತೆ ತಿರುಚಿದ್ದಾರೆ. ಬಸವಣ್ಣನವರ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ. ಈ ಬದಲಾವಣೆ ನಿಜಕ್ಕೂ ಖಂಡನಾರ್ಹ. ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು ಎನ್ನುವುದು ಶುದ್ಧ ಸುಳ್ಳು. ಅವರು ಲಿಂಗಾಯತ ಧರ್ಮವನ್ನು ಜಾರಿಯಲ್ಲಿ ತಂದರು ಎಂದಾಗಬೇಕಿತ್ತು. ಇಂತಹ ಹಲವು ದೋಷಗಳಿವೆ. ಅದುದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
