ಐಪಿಎಲ್ನಲ್ಲಿ ಅತಿ ಹೆಚ್ಚು ಖ್ಯಾತಿ ಹಾಗು ವಿಶಿಷ್ಟ ಅಭಿಮಾನಿ ಬಳಗವನ್ನ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಶುಕ್ರವಾರ ನಡೆದ ಕ್ವಾಲಿಫೈಯರ್-2ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ 7 ವಿಕೆಟ್ಗಳ ವಿರೋಚಿತ ಸೋಲನ್ನು ಅನುಭವಿಸಿತ್ತು.
ಕಳೆದ 15 ವರ್ಷಗಳಿಂದಲು ಸಹ ಆರ್ಸಿಬಿ ಒಂದು ಭಾರಿಯೂ ಕಪ್ ಗೆದ್ದಿಲ್ಲ ಆದರೆ, ತಂಡಕ್ಕೆ ಅದರದ್ದೆ ಆದ ಅಭಿಮಾನಿ ಬಳಗವಿದೆ. ಆರ್ಸಿಬಿ ತಂಡ ಕೂಡ ತನ್ನ ಅಭಿಮಾನಿ ಬಳಗವನ್ನ ತನ್ನ ಅವಿಭಾಜ್ಯ ಅಂಗ ಎಂದಿದ್ದು ಅಭಿಮಾನಿಗಳನ್ನು 12th Man ARMY ಎಂದು ಕರೆಯುತ್ತದೆ.
ಇನ್ನು ಅಭಿಮಾನಿಗಳನ್ನು ಉಲ್ಲೇಖಿಸಿ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್ ಮಾಡಿದ್ದು ಎಲ್ಲರ ಮನಗೆದಿದೆ. ತಮ್ಮ ಕ್ರಿಕೆಟ್ ಪಯಣವನ್ನು ವಿಶೇಷವಾಗಿಸಿದ್ದಕ್ಕೆ ಅಭಿಮಾನಿ ಹಾಗು ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕೆಲವೊಮ್ಮೆ ನೀವು ಗೆಲ್ಲುತ್ತೀರಿ ಕೆಲವೊಮ್ಮೆ ನೀವು ಸೋಲುತ್ತೀರಿ ಆದರೆ, ನೀವು (12th Man ARMY) ಅದ್ಭುತವಾಗಿದ್ದೀರಿ ಅಭಿಯಾನದುದ್ದಕ್ಕು ನೀವು ನಮ್ಮಗೆ ಬೆಂಬಲವಾಗಿ ನಿಂತಿದ್ದೀರಿ. ನನ್ನ ಕ್ರಿಕೆಟ್ ಪಯಣವನ್ನ ವಿಶೇಷವಾಗಿಸಿದ್ದೀರಿ ಕಲಿಕೆ ಎಂದಿಗೂ ನಿಲ್ಲುವುದಿಲ್ಲ ಅದು ಮುಂದುವರೆಯುತ್ತದೆ.
ಮುಂದುವರೆದು, ತಂಡದ ಸಿಬ್ಬಂದಿ ಹಾಗು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳು ಮುಂದಿನ ಋಉತುವಿನಲ್ಲಿ ನಿಮ್ಮನ್ನು ಭೇಟಿಯಾಗೋಣ ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಹೃದಯ ಗೆದಿದ್ದಾರೆ.