1988ರಲ್ಲಿ ವೃದ್ದರೊಬ್ಬರ ಮೇಲೆ ನಡೆದ ಹಲ್ಲೆ ಹಾಗು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸ ಅನುಭವಿಸುತ್ತಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತೆ ಸುದ್ದಿಯಲ್ಲಿದ್ದಾರೆ.
ಪಟಿಯಾಲ ಕೇಂದ್ರ ಕಾರಾಗೃಹದಲ್ಲಿ 90ರೂಪಾಯಿ ದಿನಗೂಲಿ ಮೇಲೆ ಗುಮಾಸ್ತನ ಕೆಲಸಕ್ಕೆ ಸೇರಿದ ಸಿಧು ಭದ್ರತೆಯ ಕಾರಣಗಳಿಂದಾಗಿ ಸದ್ಯ ವರ್ಕ್ ಫ್ರಮ್ ಸೆಲ್ ಮಾಡುತ್ತಾ ಇದ್ದಾರೆ.
ಸದ್ಯ ಜೈಲ್ಲಿನಲ್ಲಿರುವ ಸಿಧು ಪಟಿಯಾಲದ ರಾಜೀಂದ್ರ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಗಾದಾಗ ವೈದ್ಯರ ತಂಡವು ವಿಶಿಷ್ಟ ಆಹಾರವನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.
ಬೆಳಗೆ ಖಾಲಿ ಹೊಟ್ಟೆಗೆ ರೋಸ್ಮೆರಿ ಟೀ, ಬಾದಾಮಿ, ಎಳನೀರು, ವಾಲ್ನಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಬೆಳಗಿನ ಉಪಾಹಾರಕ್ಕೆ ತರಕಾರಿ ಜ್ಯೂಸ್ ಅಥವಾ ಫಲಹಾರ ಸೇವನೆ. ಮಧ್ಯಾಹ್ನದ ಉಟಕ್ಕೆ ಸೌತೆಕಾಯಿ ಮತ್ತು ಚಪಾತಿಯನ್ನ ಸೇವಿಸುವಂತೆ ಹೇಳಿದ್ದಾರೆ.
ಸಾಯಂಕಾಲದ ಉಪಾಹಾರಕ್ಕಾಗಿ ಒಂದು ಕಪ್ ಟೀ ಹಾಗು 25 ಗ್ರಾಂ ಪನ್ನೀರ್. ರಾತ್ರಿ ಉಪಹಾರಕ್ಕಾಗಿ ತರಕಾರಿ ಹಾಗು ದಾಲ್ ಸೂಪ್ ಸೇವಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಒಟ್ಟಿನಲ್ಲಿ ಸದಾ ವಿವಾದದ ಕೇಂದ್ರ ಬಿಂದುವಾಗಿದ್ದ ಸಿಧು ಇದೀಗ ತಮ್ಮ ಆಹಾರ ಪದ್ದತಿ ಮೂಲಕ ಎಲ್ಲರ ಗಮನ ಸೆಳೆದಿರುವುದು ಗಮನಾರ್ಹ.