ಈಶಾನ್ಯದಲ್ಲಿ ಬಿಜೆಪಿ “ಭ್ರಷ್ಟಾಚಾರದ ಸಂಸ್ಕೃತಿ” ಯನ್ನು ಕೊನೆಗೊಳಿಸಿದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟಿದ್ದ ಹಣವನ್ನು ಈಗ ಕಟ್ಟ ಕಡೆಯ ವ್ಯಕ್ತಿಗೆ ವರ್ಗಾಯಿಸಲಾಗಿದೆ, ಆದರೆ ಕಾಂಗ್ರೆಸ್ ಆಡಳಿತದಲ್ಲಿ ಮಧ್ಯವರ್ತಿಗಳು ಹೆಚ್ಚಿನ ಮೊತ್ತವನ್ನು ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯಲ್ಲಿ ₹ 1,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಅಮಿತ್ ಶಾ ನೆರವೇರಿಸಿ ಮಾತನಾಡಿದ ಅವರು, 50 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಈ ಪ್ರದೇಶ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು ಎಂದ ಅವರು, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರವೇ ಅಭಿವೃದ್ಧಿ ವೇಗದ ಹಾದಿಯಲ್ಲಿ ಸಾಗಿದೆ ಎಂದು ಪ್ರತಿಪಾದಿಸಿದರು.
ನಮ್ಸಾಯಿ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಕಾಂಗ್ರೆಸ್ಗೆ, ಪಕ್ಷವು ಕಣ್ಣು ಮುಚ್ಚಿದರೆ ಅಭಿವೃದ್ಧಿಯನ್ನು ನೋಡಲು ಸಾಧ್ಯವಿಲ್ಲ,”ರಾಹುಲ್ ಗಾಂಧಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ ನಿಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು ಭಾರತೀಯ ಕನ್ನಡಕಗಳನ್ನು ಧರಿಸಿ. ಆಗ ಮಾತ್ರ, ನಿಮ್ಮ ಪಕ್ಷವು 50 ವರ್ಷಗಳಲ್ಲಿ ಮಾಡಲು ವಿಫಲವಾದ ಪ್ರದೇಶಕ್ಕೆ ಪ್ರಧಾನಿ ಮೋದಿ ಅವರು ಯಾವ ಅಭಿವೃದ್ಧಿಯನ್ನು ತಂದಿದ್ದಾರೆ ಎಂಬುದನ್ನು ನೀವು ನೋಡಬಹುದು” ಎಂದು ಟೀಕಿಸಿದ್ದಾರೆ.