ದಕ್ಷಿಣ ದಿಲ್ಲಿಯ ಫ್ಲ್ಯಾಟ್ ಒಂದರಲ್ಲಿ ಓರ್ವ ಮಧ್ಯವಯಸ್ಕ ಮಹಿಳೆ ಮತ್ತು ಇಬ್ಬರು ಪುತ್ರಿಯರು ತಮ್ಮ ಕೋಣೆಯನ್ನು ʼವಿಷಾನಿಲ ಛೇಂಬರ್ʼ ಆಗಿ ಪರಿವರ್ತಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ತ್ರಿವಳಿ ಆತ್ಮಹತ್ಯೆ ನಡೆದ ವಸಂತ ವಿಹಾರ್ ಸಮೀಪದ ಫ್ಲಾಟ್‌ನಿಂದ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫ್ಲ್ಯಾಟ್‌ನ ಎಲ್ಲಾ ಬಾಗಿಲುಗಳು, ಕಿಟಕಿಗಳು ಮತ್ತು ವೆಂಟಿಲೇಟರ್‌ಗಳನ್ನು ಫಾಯಿಲ್ ತರಹದ ವಸ್ತುವಿನಿಂದ ಪ್ಯಾಕ್ ಮಾಡಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ವಿಷಾನಿಲ ಕೊಠಡಿಯಿಂದ ಹೊರಬರುವುದಿಲ್ಲ ಮತ್ತು ಒಳಗೆ ಯಾರೂ ನೋಡುವುದಿಲ್ಲ ಎಂಬುದನ್ನು ಖಚಿತಪಡಿಸಲು ಈ ರೀತಿ ಮಾಡಿರಬಹುದೆಂದು ಅಂದಾಜಿಸಲಾಗುದೆ.
ಈ ಎಲ್ಲ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಅಡುಗೆ ಅನಿಲ ಸಿಲಿಂಡರ್‌ನ ಮತ್ತು ಕಲ್ಲಿದ್ದಲು ಬೆಂಕಿ ಬಳಸಿ ಕೋಣೆಯಲ್ಲಿ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಅನ್ನು ನಿರ್ಮಿಸಿದ್ದು, ಅದು ಮೂವರ ಸಾವಿಗೆ ಕಾರಣವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಆತ್ಮಹತ್ಯಾ ಪತ್ರದಲ್ಲಿ “ತುಂಬಾ ಮಾರಣಾಂತಿಕ ಅನಿಲ ಕಾರ್ಬನ್ ಮಾನಾಕ್ಸೈಡ್ ಒಳಗೆ ಇದೆ. ಇದು ಉರಿಯುವಂತಹದ್ದು. ದಯವಿಟ್ಟು ಕಿಟಕಿ ತೆರೆದು ಫ್ಯಾನ್ ತೆರೆಯುವ ಮೂಲಕ ಕೊಠಡಿಗೆ ಗಾಳಿ ಬರುವಂತೆ ಮಾಡಿ. ಬೆಂಕಿಕಡ್ಡಿ, ಕ್ಯಾಂಡಲ್ ಅಥವಾ ಯಾವುದನ್ನೂ ಉರಿಸಬೇಡಿ!! ಪರದೆಯನ್ನು ತೆಗೆಯುವಾಗ ಜಾಗರೂಕರಾಗಿರಿ ಏಕೆಂದರೆ ಕೊಠಡಿ ಅಪಾಯಕಾರಿ. ಅನಿಲವನ್ನು ಸೇವಿಸಬೇಡಿ” ಎಂದು ಬರೆಯಲಾಗಿತ್ತು ಎಂದು ndtv ವರದಿ ಮಾಡಿದೆ.
ಮೃತ ಮಹಿಳೆಯನ್ನು ಮಂಜು ಶ್ರೀವಾಸ್ತವ ಹಾಗೂ ಇಬ್ಬರು ಪುತ್ರಿಯರನ್ನು ಅಂಶಿಕಾ ಹಾಗೂ ಅಂಕು ಎಂದು ಗುರುತಿಸಲಾಗಿದೆ. ಕೋವಿಡ್‌ನಿಂದಾಗಿ ಮಹಿಳೆ ಪತಿ ಮೃತಪಟ್ಟಿದ್ದು, ಅದರ ಬಳಿಕ ಕುಟುಂಬವು ಮಂಕಾಗಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.













