ಪ್ರಕರಣದ ದಾಖಲೆಗಳನ್ನು ನಾಶಮಾಡಲು ಅಪರಾಧಿಗಳು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣ ಅಸ್ಸಾಂನ ನಾಗಾಂವ್ ಜಿಲ್ಲೆಯ ಬಟದ್ರವಾದಲ್ಲಿ ನಡೆದಿದೆ.
ಹೌದು, ಅಸ್ಸಾಂನ ನಾಗಾಂವ್ ಜಿಲ್ಲೆಯ ಬಟದ್ರವಾದ ಪೊಲೀಸ್ ಠಾಣೆಗೆ ಅನಾಮದೇಯ ಗುಂಪೊಂದು ಬೆಂಕಿ ಹಚ್ಚಿದ್ದು, ಮೊದ ಮೊದಲು ಇದು ಕಸ್ಟಡಿ ಸಾವಿನ ಕುರಿತಾದ ಪ್ರತಿಕ್ರಿಯೆ ದಾಳಿ ಎಂದು ಚರ್ಚೆಯಾಗುತ್ತಿತ್ತು. ಆದರೀಗ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ದಾಳಿಯು “ಕ್ರಿಯೆ-ಪ್ರತಿಕ್ರಿಯೆ ಘಟನೆ” ಅಲ್ಲ ಬದಲಿಗೆ ಪ್ರಕರಣದ ದಾಖಲೆಗಳನ್ನು ನಾಶಮಾಡಲು ಅಪರಾಧಿಗಳು ನಡೆಸಿರುವ ದಾಳಿ ಎಂದು ಅಸ್ಸಾಂ ರಾಜ್ಯ ಪೊಲೀಸ್ ಮುಖ್ಯಸ್ಥ ಭಾಸ್ಕರ್ ಜ್ಯೋತಿ ಮಹಂತ ಇಂದು ಹೇಳಿದ್ದಾರೆ.
ನಾಗಾಂವ್ ಜಿಲ್ಲೆಯ ಬಟದ್ರವಾ ಪೊಲೀಸ್ ಠಾಣೆಗೆ ಗುಂಪೊಂದು ಬೆಂಕಿ ಹಚ್ಚಿದ ಒಂದು ದಿನದ ನಂತರ ಪೊಲೀಸ್ ಮುಖ್ಯಸ್ಥರ ಈ ಹೇಳಿಕೆ ಹೊರಬಿದ್ದಿದೆ. ಹಿಂಸಾಚಾರದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಈ ಸಂಬಂಧ ಇದುವರೆಗೆ 21 ಮಂದಿಯನ್ನು ಬಂಧಿಸಲಾಗಿದೆ.
ಅಸ್ಸಾಂ ರಾಜ್ಯ ಪೊಲೀಸ್ ಮುಖ್ಯಸ್ಥ ಭಾಸ್ಕರ್ ಜ್ಯೋತಿ ಮಹಂತ ಅವರು ತಮ್ಮ ಟ್ವೀಟರ್ ನಲ್ಲಿ ಈ ಕುರಿತು ಬರೆದುಕೊಂಡಿದ್ದು, 39 ವರ್ಷದ ಮೀನು ಮಾರಾಟಗಾರ ಸಫಿಕುಲ್ ಇಸ್ಲಾಂ ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿದ್ದಾರೆ ಎಂಬ ದೂರನ್ನು ಪೊಲೀಸರು ಸ್ವೀಕರಿಸಿದ ನಂತರ ಇಸ್ಲಾಂನನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು.

“ಅವನನ್ನು ಕರೆತರುವ ಮೊದಲು ಅವನು ಸಾರ್ವಜನಿಕ ರಸ್ತೆಯಲ್ಲಿ ಮಲಗಿದ್ದನು. ವೈದ್ಯಕೀಯ ತಪಾಸಣೆಯ ನಂತರ ಅವನನ್ನು ಠಾಣೆಗೆ ಕರೆತರಲಾಯ್ತು. ಮರುದಿನ ಅವನನ್ನು ಬಿಡುಗಡೆ ಮಾಡಿ ಅವನ ಹೆಂಡತಿಗೆ ಒಪ್ಪಿಸಲಾಯಿತು. ಅವನ ಹೆಂಡತಿ ಅವನಿಗೆ ಸ್ವಲ್ಪ ನೀರು/ಆಹಾರವನ್ನು ಕೊಟ್ಟಳು. ಅನಾರೋಗ್ಯದಿಂದ ಎರಡು ಆಸ್ಪತ್ರೆಗಳಿಗೆ ಕರೆದೊಯ್ಯಲಾದರೂ ದುರದೃಷ್ಟವಶಾತ್ ತೀರಿಕೊಂಡಿದ್ದಾರೆ ಎಂದು ಘೋಷಿಸಲಾಯಿತು,” ಶ್ರೀ ಮಹಾಂತ ಬರೆದಿದ್ದಾರೆ. ಪೊಲೀಸರಿಂದಲೇ ಸಾವನಪ್ಪಿದ್ದಾರೆ ಎಂದು ಅವರ ಕುಟುಂಬ ಈಗ ತೀರಿಕೊಂಡ ನಂತರ ದೂರು ನೀಡಿದ್ದಾರೆ.
ಅಸ್ಸಾಂ ಪೊಲೀಸರು ಈ ಸಾವನ್ನು “ತುಂಬಾ ಗಂಭೀರವಾಗಿ” ಪರಿಗಣಿಸಿದ್ದು, ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ ಎಂದು ಭಾಸ್ಕರ್ ಜ್ಯೋತಿ ಅವರು ಒತ್ತಿ ಹೇಳಿದರು. “ನಮ್ಮ ಕೊನೆಯಲ್ಲಿ ಯಾವುದೇ ಫೌಲ್ ಪ್ಲೇ ಇದ್ದರೆ, ನಾವು ಅದನ್ನು ಪತ್ತೆ ಹಚ್ಚುತ್ತೇವೆ ಮತ್ತು ಕಾನೂನಿನ ಪ್ರಕಾರ ತಪ್ಪಿತಸ್ಥರನ್ನು ಶಿಕ್ಷಿಸುತ್ತೇವೆ ಎಂದು ಹೇಳಿದರು.
ನಂತರ ರಾಜ್ಯ ಪೊಲೀಸ್ ಮುಖ್ಯಸ್ಥರು ಪೊಲೀಸ್ ಠಾಣೆಯ ಮೇಲಿನ ದಾಳಿಯ ಬಗ್ಗೆ ಮಾತನಾಡಿದರು. ” ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಠಾಣಾಯನ್ನು ಸುಟ್ಟುಹಾಕಿದ್ದಾರೆ. ಈ ಕೆಟ್ಟ ಅಂಶಗಳು ಮಹಿಳೆಯರು, ಪುರುಷರು, ಯುವಕರು ಮತ್ತು ಹಿರಿಯರು ಎಲ್ಲರ ಭಾಗಿ ಇದೆ. ಅವರು ಪೊಲೀಸ್ ಪಡೆಯ ಮೇಲೆ ನಡೆಸಿದ ಉಗ್ರ ಮತ್ತು ಸಂಘಟಿತ ದಾಳಿ ನಮ್ಮನ್ನು ಆಳವಾಗಿ ಯೋಚಿಸುವಂತೆ ಮಾಡಿದೆ,’’ ಎಂದಿ ಹೇಳಿದ್ದಾರೆ.