ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು ನಿನ್ನಿಗಿಂತ ಇಂದು ಕೊಂಚ ಕುಸಿತ ಕಂಡಿದ್ದು , ಕಳೆದ 24 ಗಂಟೆಯಲ್ಲಿ 2,226 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
ಆದರೆ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗಿದ್ದು , 24 ಗಂಟೆಯಲ್ಲಿ 65 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನ ಪ್ಪಿ ದವರ ಸಂಖ್ಯೆ 5,24,413 ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 14,955 ಕೋವಿಡ್ ಸಕ್ರಿಯ ಪ್ರ ಕರಣಗಳಿದ್ದು , 24 ಗಂಟೆಯಲ್ಲಿ 2,202 ಜನರುಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,25,97,003 ಜನರುಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ನಿನ್ನೆ 14,37,381 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು , ದೇಶದಲ್ಲಿ ಈವರೆಗೆ 1,92,28,66,524 ಡೋಸ್ ಲಸಿಕೆ ಹಾಕಲಾಗಿದೆ. ನಿನ್ನೆ 4,42,681 ಜನರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ.






