ಹೊಸ ಮದರಸಾಗಳಿಗೆ ಯಾವುದೇ ಅನುದಾನ ನೀಡುವುದಿಲ್ಲ ಎಂದು ಉತ್ತರ ಪ್ರದೇಶದ ಯೋಗಿ ಸರ್ಕಾರ ನಿರ್ಧರಿಸಿದೆ. ಯೋಗಿ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 558 ಮದರಸಾಗಳಿಗೆ ಸರ್ಕಾರದ ಅನುದಾನ ನೀಡಲಾಗುತ್ತಿದೆ.
ಯೋಗಿ ಸರ್ಕಾರದ ಈ ನಿರ್ಧಾರಕ್ಕೆ ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಬದೌರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಮದರಸಾ ಎಲ್ಲಾ ಮಾನದಂಡಗಳನ್ನು ಪೂರೈಸಿದರೆ ಅನುದಾನ ನೀಡಲು ಏನು ತೊಂದರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷವು ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ಈಗ ಶಿಕ್ಷಣದಲ್ಲೂ ದ್ವೇಷದ ರಾಜಕಾರಣ ಮಾಡಲು ಬಯಸುತ್ತಿದ್ದಾರೆ. ಒಂದು ಮದರಸಾ ಗುಣಮಟ್ಟವನ್ನು ಪೂರೈಸಿದರೆ ಅನುದಾನ ನೀಡಲು ಏನು ತೊಂದರೆ? ಮದರಸಾಗಳಿಂದಲೂ ಡಾಕ್ಟರ್-ಇಂಜಿನಿಯರ್ ಗಳನ್ನು ಹುಟ್ಟು ಹಾಕಬೇಕೆಂದರೆ ಹೀಗೆ ತಾರತಮ್ಯ ಮಾಡಿದರೆ ಹೇಗೆ ಸಾಧ್ಯ. ಮದ್ರಸಾವು ಗುಣಮಟ್ಟವನ್ನು ಪೂರೈಸಿದರೆ ನೀವು ಸಹಾಯ ಮಾಡಬೇಕೆಂಬುದು ಸರ್ಕಾರದ ಜವಾಬ್ದಾರಿಯಾಗಿದೆ ಏಕೆಂದರೆ ಭಾರತದ ಮಕ್ಕಳು ಸಹ ಅಲ್ಲಿ ಓದುತ್ತಾರೆ ಎಂದು ಅವರು ಹೇಳಿದ್ದಾರೆ.

ಶಿಕ್ಷಣದಲ್ಲೂ ದ್ವೇಷದ ರಾಜಕಾರಣ: ಅನುರಾಗ್ ಬದೌರಿಯಾ
ಸರ್ಕಾರವು ದ್ವೇಷದ ರಾಜಕೀಯವನ್ನು ಉತ್ತೇಜಿಸಲು ಬಯಸಿ ಈ ರೀತಿ ಮಾಡುತ್ತಿದೆ ಮತ್ತು ಶಿಕ್ಷಣದಲ್ಲಿ ದ್ವೇಷದ ಬಗ್ಗೆ ಮಾತನಾಡಲು ಬಯಸುತ್ತದೆ, ಇದು ಭಾರತಕ್ಕೆ ಕಳವಳಕಾರಿಯಾಗಿದೆ ಎಂದು ಎಸ್‌ಪಿ ನಾಯಕ ಹೇಳಿದ್ದಾರೆ.
ಸರಕಾರ ಶಿಕ್ಷಣದ ಜತೆಗೆ ಧರ್ಮ, ಜಾತಿ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ ಎಷ್ಟೋ ಸಮಸ್ಯೆಗಳಿದ್ದು, ಅವುಗಳನ್ನು ಚರ್ಚಿಸದೆ, ಜ್ಞಾನವಾಪಿ, ತಾಜ್ ಮಹಲ್, ಕುತುಬ್ ಮಿನಾರ್ ವಿಚಾರಗಳನ್ನು ತರುವುದಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಇದೇ ವೇಳೆ ಮದರಸಾ ವ್ಯವಸ್ಥಾಪಕ ಅಬ್ದುಲ್ಲಾ ಮಾತನಾಡಿ, ಮದರಸಾಗಳಲ್ಲಿ ಕುರಾನ್, ಹದೀಸ್, ಉರ್ದು ಮಾತ್ರವಲ್ಲ. ಅಲ್ಲಿ ಹಿಂದಿ, ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಲ್ಲಿ ಕೂಡಾ ಶಿಕ್ಷಣ ನೀಡಲಾಗುತ್ತದೆ. ಸರಕಾರವೇ ಹೀಗೆ ಮಾಡುತ್ತಿದ್ದರೆ, ಒಂದು ಕೈಯಲ್ಲಿ ಕಂಪ್ಯೂಟರ್, ಒಂದು ಕೈಯಲ್ಲಿ ಕುರಾನ್ ಎಂದು ಹೇಳಿದ್ದು ಏಕೆ ಎಂದು ಪ್ರಧಾನಿಯವರನ್ನು ಕೇಳಬೇಕು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.












