ಭಾರತ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಐರ್ಲೆಂಡ್ ವಿರುದ್ಧದ ಜೂನ್ ಕೊನೆಯ ವಾರದಲ್ಲಿ ನಡೆಯಲಿರುವ 2 ಪಂದ್ಯಗಳ ಟಿ-20ಸರಣಿಗೆ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಿದ್ಥತೆ ಮಾಡಿಕೊಳ್ಳಬೇಕಿರುವ ಕಾರಣ ತಾತ್ಕಾಲಿಕವಾಗಿ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಜುಲೈ 1ರಿಂದ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಸರಣಿಯಲ್ಲಿ ಭಾರತ 1 ಟೆಸ್ಟ್ ಹಾಗೂ 5 ಟಿ-20 ಪಂದ್ಯಗಳನ್ನು ಆಡಲಿದ್ದು, ಭಾರತದ ಆಟಗಾರರಿಗೆ ಈ ಪ್ರವಾಸ ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ.
ಇದಕ್ಕೂ ಮುನ್ನ ಅಂದರೆ ಜೂನ್ 26 ಮತ್ತು 28ರಂದು ಎರಡು ದಿನಗಳ ಕಾಲ ಐರ್ಲೆಂಡ್ ವಿರುದ್ಧ ಭಾರತ 2 ಟಿ-20 ಪಂದ್ಯಗಳನ್ನು ಆಡಲಿದೆ.