• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಹಿಂದೂ ಸಂಘಟನೆಗಳು ಮಕ್ಕಳನ್ನು ಉಗ್ರಗಾಮಿಗಳನ್ನಾಗಿ ತಯಾರಿಸಲು ಹೊರಟಿದ್ದಾರೋ? : ಮಾಜಿ ಸಿಎಂ ಹೆಚ್.ಡಿ.ಕೆ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
May 17, 2022
in ಕರ್ನಾಟಕ
0
ಸಿಎಂ ಬೊಮ್ಮಾಯಿಯವರಿಗೆ ಗಂಡಸ್ತನ ಇದ್ದರೆ ಇಂತಹ ಸಮಯದಲ್ಲಿ ಮೌನವಾಗಿರಬೇಡಿ : ಹೆಚ್‌ಡಿ ಕುಮಾರಸ್ವಾಮಿ | HDK |  Bommai
Share on WhatsAppShare on FacebookShare on Telegram

ADVERTISEMENT

ಶಾಲೆಗಳಲ್ಲಿ ಮಕ್ಕಳಿಗೆ ಶಾಸ್ತ್ರಾಭ್ಯಾಸವನ್ನು ನೀಡಲು ಭ ಮುಖಂಡರು ಮುಂದಾಗಿದ್ದು, ಏರ್ ಗನ್ ಶಸ್ತ್ರಾಭ್ಯಾಸ ಎಂದು ಹೇಳಿದ್ದಾರೆ. ಹಿಂದೂ ಸಂಘಟನೆಗಳು ಮಕ್ಕಳನ್ನು ಸಹ ಉಗ್ರಗಾಮಿಗಳ ಗುಂಪುಗಳನ್ನಾಗಿ ತಯಾರಿಸಲು ಹೊರಟಿದ್ದಾರೋ? ಅಥವಾ ಸಮಾಜದಲ್ಲಿ ಶಾಂತಿ ಮೂಡಿಸುವ ನಿಟ್ಟಿನಲ್ಲಿ ಉತ್ತೇಜಿಸಲು ಹೊರಟಿದ್ದಾರಾ? ಎನ್ನುವುದನ್ನು ಅವರೇ ತಿಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಅರಕಲಗೂಡು ತಾಲ್ಲೂಕಿನ, ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ಇಂದು ಮಾತನಾಡಿದ ಅವರು,ಒಂದು ಕಡೆ ಸಮಾಜದ ಭಾವೈಕ್ಯತೆ ಹಾಗೂ ಸಾಮರಸ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ ಸಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು, ಇದನ್ನೇ ಗಾಂಧೀಜಿ ಸಹ ಬಯಸಿದ್ದರು. ಶಸ್ತ್ರದಿಂದ ನಮ್ಮ ಹೋರಾಟ ಅಲ್ಲ. ನಮ್ಮ ಹೋರಾಟ ಹಾಗೂ ಜಯಗಳು ನಮ್ಮ ದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತದ್ದಾಗಬೇಕು, ಶಾಂತಿಯುತ ಹೋರಾಟದಿಂದ ನಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬೇಕೆ ಹೊರತು ಶಸ್ತ್ರಾಭ್ಯಾಸ ಗಳನ್ನು ಮಾಡಿ ಅಥವಾ ಶಸ್ತ್ರಗಳನ್ನು ಇಟ್ಟುಕೊಂಡು ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದರು.

ಪಠ್ಯಕ್ರಮದ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ಯಾವುದೇ ವಿಚಾರವಿರಲಿ ಮಕ್ಕಳಿಗೆ ಅನುಕೂಲವಾಗುವ ವಿಚಾರಗಳನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕು. ಗುಣಾತ್ಮಕವಾದ ಶಿಕ್ಷಣ ಬೇಕು. ಮಕ್ಕಳಿಗೆ ಮೊದಲು ಕಲಿಸಬೇಕಾದ್ದು ಮನುಷ್ಯತ್ವವೇ ಹೊರತು ಯಾವುದೇ ವ್ಯಕ್ತಿಯ ಬಗ್ಗೆ ಅಲ್ಲ. ಹೃದಯ ವೈಶಾಲ್ಯತೆ ಹಾಗೂ ಬದುಕು ಕಲ್ಪಿಸಿಕೊಳ್ಳುವ ಕಲಿಕೆಯನ್ನು ನೀಡಬೇಕು ಎನ್ನುವುದು ನನ್ನ ಆಶಯ ಎಂದು ಹೇಳಿದರು.

ಭಗತ್‌ಸಿಂಗ್ ಒಬ್ಬ ದೇಶಪ್ರೇಮಿ, ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದಂತ ವ್ಯಕ್ತಿ. ಅಂತಹವರ ವಿಷಯಗಳನ್ನು ತೆಗೆದು ಹಾಕಿ ಹೆಗ್ಡವಾರ್ ಸೇರಿಸಲು ಹೊರಟಿದ್ದಾರೆ. ಗೋಡ್ಸೆ, ಸಾವರ್ಕರ್ ಅಂಥವರ ಪಠ್ಯವನ್ನು ತರುತ್ತಾರೋ ಎಂಬ ಬಿಜೆಪಿಯ ಅಜೆಂಡಾ ನನಗೂ ಗೊತ್ತಿಲ್ಲ. ಇದರಿಂದ ಈ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಆಗುವ ವಾತಾವರಣ ಬಿಜೆಪಿಯವರಿಗೆ ಬೇಕಾಗಿದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.

ದಿ ಕಾಶ್ಮೀರ ಪೈಲ್ಸ್ ಚಿತ್ರ ನಿರ್ಮಿಸಿದಿರಿ. ಇದರಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಅವಕಾಶ ನೀಡಿದ್ದೀರಾ? ಅಲ್ಲಿನ ರಾಜಕಾರಣಿಗಳು ಯಾವ ರೀತಿ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ. ಇಲ್ಲಿ ದ್ವೇಷದ ವಾತಾವರಣ ಬಿತ್ತುವ ಕಾರ್ಯವನ್ನು ಮಾಡಬೇಡಿ. ಪ್ರತಿಯೊಬ್ಬರಲ್ಲೂ ಸಹೋದರತ್ವ ಸಾಮರಸ್ಯ ಹಾಗೂ ಭಾವೈಕ್ಯತೆ ಹೇಗಿರಬೇಕು ಎಂಬ ಬಗ್ಗೆ ಗಮನ ನೀಡಿ ಎಂದು ಒತ್ತಾಯ ಮಾಡಿದರು.

ಮರಿತಿಬ್ಬೆಗೌಡಗೆ ಟಾಂಗ್

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿಕೆ, ಈ ಬಗ್ಗೆ ಚರ್ಚೆ ಬೇಡ. ಈ ಬಗ್ಗೆ ಶಾಸಕ ಅನ್ನದಾನಿ ಯವರೇ ಸ್ಪಷ್ಟವಾದ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ದಲಿತ ಸಮಾಜದ ಯುವಕ ವಾಸಕ್ಕೂ ಮನೆ ಇಲ್ಲದ ವ್ಯಕ್ತಿಯನ್ನು ಪಕ್ಷ ಶಾಸಕರನ್ನಾಗಿ ಆಯ್ಕೆ ಮಾಡಿದೆ. ನಾವೇನು ಅವರನ್ನು ಹಣ ಪಡೆದು ಆಯ್ಕೆ ಮಾಡಿದ್ದೆವಾ? ಎಂದು ಪ್ರಶ್ನಿಸಿದರು.

ಮರಿತಿಬ್ಬೇಗೌಡರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಟಿಕೆಟ್ ನೀಡುವ ಸಂದರ್ಭ ಅವರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಬಗ್ಗೆ ಚರ್ಚೆ ಬೇಡ. ಅವರು ಜೆಡಿಎಸ್‌ನಿಂದ ಎಂ.ಎಲ್.ಸಿ. ಆಗಿದ್ದಾರೆ ಡಿಕೆಶಿ ಹೇಗೆ ಬೆಳೆಸುತ್ತಾರೆ. ಅವರು ಹೇಗೆ ಬೆಳೆಸಲು ಸಾಧ್ಯ, ಆ ಟೈಂಗೆ ಹೇಗೆ ಬೇಕು ಹಾಗೆ ಹೇಳಿಕೊಂಡು ಹೋಗುತ್ತಾರೆ ಎಂದರು.

ಹೊರಟ್ಟಿ ಅವರಿಗೆ ಒಳ್ಳೆಯದಾಗಲಿ

ಜೆಡಿಎಸ್ ಪಕ್ಷವನ್ನು ತ್ಯಜಿಸಿರುವ ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸುತ್ತೇನೆ. ಅವರು ಪಕ್ಷವನ್ನು ಬಿಟ್ಟರೂ ಸಹ ಜೆಡಿಎಸ್ ಹಾಗೂ ಪಕ್ಷದ ವರಿಷ್ಠ ದೇವೇಗೌಡರ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನು ಆಡಿದ್ದಾರೆ. ಕೆಲವರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ ಎಂದ ಕುಮಾರಸ್ವಾಮಿ ಅವರು, ನಾವು ಮರಿತಿಬ್ಬೇಗೌಡ ರಿಗೆ ಯಾವುದೇ ಕಿರುಕುಳ ನೀಡಿಲ್ಲ. ನೀಡಿದ್ದರೆ ಅವರು ಅದನ್ನು ಹೇಳಿಕೊಳ್ಳಬಹುದಿತ್ತು ಎಂದು ಹೇಳಿದರು.

ಎ.ಟಿ.ರಾಮಸ್ವಾಮಿ ಪಕ್ಷ ಬಿಡುವುದಾಗಿ ಹೇಳಿಲ್ಲ

ಶಾಸಕರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ರಾಮಸ್ವಾಮಿ ಅವರು ನಮ್ಮ ಕುಟುಂಬದ ಹಿರಿಯ ಅಣ್ಣನಂತೆ. ಅವರು ರಾಜಕಾರಣ ಮಾಡಬೇಕಾದರೆ ನಾನಿನ್ನು ರಾಜಕಾರಣಕ್ಕೆ ಬಂದಿರಲಿಲ್ಲ. ಪಕ್ಷ ಬಿಡುತ್ತೇನೆ ಎಂದು ಎಲ್ಲಾದರು ಹೇಳಿದ್ದಾರಾ?. ಅವರು ಜನಗಳ ಮಧ್ಯೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ನೇಚರ್ ಬೇರೆ, ಬೇರೆಯವರಿಗೆ ದಯವಿಟ್ಟು ರಾಮಸ್ವಾಮಿ ಅವರನ್ನು ಹೋಲಿಸಬೇಡಿ ಎಂದು ಹೇಳಿದರು.

ಶಿವಲಿಂಗೇಗೌಡ ನಾಳೆ ಬೆಳಿಗ್ಗೆ ಅವರು ನಮ್ಮ ಜೊತೆಯಲ್ಲೇ ಇರಬಹುದು. ಪಕ್ಷ ಬಿಟ್ಟು ಹೋಗುತ್ತೇನೆ ಅಂಥ ಹೇಳಿದ್ದಾರಾ?. ಅವರ ಭದ್ರತೆಗೆ ಬೇರೆ ಕಡೆ ಓಡಾಡಿಕೊಂಡು ಇರಬಹುದು, ಬೇರೆ ಅರ್ಥ ನಾನು ಕಲ್ಪಿಸಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಆಗಲ್ಲ ಎಂದು ಹೇಳಿದರು.

ಹಾಸನ ಜಿಲ್ಲೆ ರಾಜಕಾರಣದಲ್ಲಿ ರೇವಣ್ಣ ಹಾಗೂ ಶಿವಲಿಂಗೇಗೌಡರು ನಿರಂತರ ಸಂಪರ್ಕದಲ್ಲಿದ್ದಾರೆ. ಅವರವರಲ್ಲಿ ವಿಶ್ವಾಸ ಇದ್ದರೆ ನಾನು ಅದಕ್ಕೆ ಧಕ್ಕೆ ತರಲ್ಲ. ನಾನು ಯಾವಾಗ ಮಾತನಾಡಬೇಕು, ಆಗ ಮಾತನಾಡುತ್ತೇನೆ. ನನ್ನ ಬಂದು ಭೇಟಿ ಆಗಲಿ ಅಂತ ಹೇಳಿದ್ದೀನೇ ಎಂದರು.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ದಶಕದ ಕೊನೆಯಲ್ಲಿ 6ಜಿ ನೆಟ್‌ ವರ್ಕ್ : ಪ್ರಧಾನಿ ಮೋದಿ

Next Post

ಫ್ಯಾಟ್ ಸರ್ಜರಿ ಅಡ್ಡಪರಿಣಾಮದಿಂದ ಬಲಿಯಾದ ಸಿನಿತಾರೆಯರು

Related Posts

Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
0

ಆರ್‌ಎಸ್‌ಎಸ್‌ ವಿರುದ್ಧ ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಆ ರೀತಿ ಕ್ರಮವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ...

Read moreDetails

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

October 13, 2025

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
Next Post
ಫ್ಯಾಟ್ ಸರ್ಜರಿ ಅಡ್ಡಪರಿಣಾಮದಿಂದ ಬಲಿಯಾದ ಸಿನಿತಾರೆಯರು

ಫ್ಯಾಟ್ ಸರ್ಜರಿ ಅಡ್ಡಪರಿಣಾಮದಿಂದ ಬಲಿಯಾದ ಸಿನಿತಾರೆಯರು

Please login to join discussion

Recent News

Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
Top Story

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

by ಪ್ರತಿಧ್ವನಿ
October 13, 2025
Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada